ಸಂಗೀತ, ವಿದುಷಿ, ಉಮಾರವರಿಗೆ ವೃತ್ತಿಗಿಂತಲೂ ಪ್ರವೃತ್ತಿಯೆಂದು ಹೇಳಬಹುದು !

ಪತಿ, ಶ್ರೀ ನಾಗಭೂಷಣರು ತಮ್ಮ ಕಚೇರಿಯ ಕೆಲಸದ ಬಳಿಕ, ಮೈಸೂರು ಸಂಗೀತ ವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಸದಾ ಆಸಕ್ತರು. ಸತಿ-ಪತಿಗಳ ನಿರಂತರ ಅವಿಶ್ರಾಂತ ಕಾರ್ಯಚಟುವಟಿಗೆಗಳ ಫಲಸ್ವರೂಪದಿಂದ ಈ ಸಂಸ್ಥೆ ತಲೆಯೆತ್ತಿನಿಂತಿದೆ.
" ಕರ್ನಾಟಕ ಸಂಗೀತ ಗಾಯನವು ಕೇವಲ ಮನರಂಜನೆಯಲ್ಲಿ ಮಾತ್ರವಲ್ಲದೆ, ಅಧ್ಯಾತ್ಮವೂ ಅದರಲ್ಲಡಗಿರುವುದನ್ನು ನಾವು ಗುರುತಿಸಬೇಕು. ಲೌಕಿಕ ಹಾಗೂ ಪಾರಮಾರ್ಥಿಗಳ ಸುಖಕ್ಕೆ ಲಭ್ಯವಾಗಿರುವ ಸಂಗೀತವೆಂದರೆ, ’ಕರ್ನಾಟಕ ಸಂಗೀತ ’ ! -ವಿದುಷಿ, ಶ್ರೀಮತಿ. ಉಮಾನಾಗಭೂಷಣ, ಪ್ರಾಂಶುಪಾಲರು, ಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ. ಮಹಾರಾಷ್ಟ್ರ ರಾಜ್ಯ. ದೂರಧ್ವನಿ ಕ್ರಮಾಂಕ : 09323986708/02513292174
Comments