Posts

ಮುಂಬಯಿಯ ಮೈಸೂರ್ ಸಂಗೀತ ವಿದ್ಯಾಲಯ ದೊಂಬಿವಲಿಯ ಆಡಳಿತಾಧಿಕಾರಿ ಶ್ರೀ. ಬಿ. ನಾಗಭೂಷಣ್ ಇನ್ನಿಲ್ಲ !

Image
ಮುಂಬಯಿಯ ಮೈಸೂರ್ ಸಂಗೀತ ವಿದ್ಯಾಲಯ ದೊಂಬಿವಲಿಯ ಆಡಳಿತಾಧಿಕಾರಿ ಶ್ರೀ. ಬಿ. ನಾಗಭೂಷಣ್ ಇನ್ನಿಲ್ಲ ! ನನ್ನ ಆತ್ಮೀಯ ಗೆಳೆಯ, ಹಾಗೂ ಮುಂಬೈ ಕನ್ನಡಿಗರ ಪ್ರೀತಿಯ ನಾಗಭೂಷಣ್, 10 ಆಗಸ್ಟ್, ೨೦೧೭ ರಂದು ಬೆಂಗಳೂರಿನಲ್ಲಿ ನಿಧನರಾದರು. ಸದಾ ಹಸನ್ಮುಖಿ, ಹಾಗು ಒಳ್ಳೆಯ ಸಂಘಟಕ ಮತ್ತು ಸಹೃದಯಿ ! ಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ  : ೧೯೮೨ ರಲ್ಲಿ ಮುಂಬಯಿನ ಹೆಸರಾಂತ ವೀಣಾ ವೈಣಿಕ, ಶ್ರೀ. ಶಂಕರನಾರಾಯಣ ರಾಯರ ಆಶೀರ್ವಾದದಿಂದ ಕರ್ನಾಟಕ ಸಂಗೀತ  ವಿದುಷಿ. ಉಮಾ ನಾಗಭೂಷಣ್ ಹಾಗೂ ನಾಗಭೂಷಣ್ ದಂಪತಿಗಳು ಡೊಂಬಿವಲಿಯಲ್ಲಿ  ಮೈಸೂರು ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು.  ಇಲ್ಲಿ ಮಕ್ಕಳಿಗೆ, ಯುವಕರಿಗೆ, ಹಾಗು ಸಂಗೀತಾಭಿಲಾಷಿಗಳಿಗೆಲ್ಲಾ ಸಂಗೀತ ಕಲಿಸಲು ಆರಂಭಿಸಿದರು. ಬೆಂಗಳೂರಿನ ಸಂಗೀತ ಪರೀಕ್ಷಾ ಕೇಂದ್ರದಲ್ಲಿ  ಮುಂಬಯಿನ ಉಮನಾಗಭೂಷಣ್ ರವರ ವಿದ್ಯಾರ್ಥಿಗಳು ಭಾಗವಹಿಸಿ, ಪದವಿ ಪಡೆಯುತ್ತಿದ್ದರು.  ಈ ವಿದ್ಯಾರ್ಥಿಗಳಿಗೆ ಸಂಗೀತದ ಪ್ರಶಿಕ್ಷಣವನ್ನು ಉಮಾರವರು ಕೊಡುತ್ತಿದ್ದರು. ನಾಗಭೂಷರು, ಈ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಪರೀಕ್ಷೆ ಕೇಂದ್ರಕ್ಕೆಕರೆದುಕೊಂಡು ಹೋಗಿ, ಪರೀಕ್ಷೆ  ಮುಗಿದ ಬಳಿಕ ಅವರನ್ನು ಮುಂಬಯಿಗೆ ಕ್ಷೇಮವಾಗಿ ಕರೆದುಕೊಂಡು ಬರುವ ಗುರುತಗರ ಜವಾಬ್ದಾರಿಯನ್ನು ಹಲವು ದಶಕಗಳ ಕಾಲ ಅತ್ಯಂತ ಸಮರ್ಪಕವಾಗಿ ನಿಭಾಯಿಸಿದರು.  ಈಗ ಮುಂಬಯಿನಲ್ಲೇ  ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ.   ನಾಗಭೂಷಣ್ ತಮ್ಮ ಪತ್ನಿ ವಿದುಷಿ

Aradhana celebrations of musical saints Shri. Purandaradasa & Thyagaraja-2016 !

Image
Aradhana celebrations of musical saints Shri. Purandaradasa & Thyagaraja-2016 !                             14th, February, 2016. Programs conducted at Bengaluru Programs held at Dombivli, on 21st, February, 2016

ಹೊಸ ಸುದ್ದಿ : ಮುಂಬೈ ಸಹೃದಯರಿಗೆ, ಈ ಮೂಲಕ ತಿಳಿಸಲು ಹರ್ಷಿಸುತ್ತೇನೆ. ಮೈಸೂರು ಸಂಗೀತ ವಿದ್ಯಾಲಯದ ಬೆಂಗಳೂರು ಶಾಖೆಯ ಶುಭಾರಂಭವಾಗಿದೆ !

Image
ಮೂರೂ ದಶಕಕ್ಕೆ ಮೇಲ್ಪಟ್ಟು ಮಹಾರಾಷ್ಟ್ರದ ಡೊಮ್ಬಿವಲಿಯ  ಕರ್ನಾಟಕ ಸಂಗೀತಾಸಕ್ತರಿಗೆ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ತರಪೇತಿ ನೀಡಿ ಬೆಂಗಳೂರಿಗೆ ಕರೆದೊಯ್ದು ಕರ್ನಾಟಕ ಸರ್ಕಾರದ ಸಂಗೀತದ ಪರೀಕ್ಷೆಗೆ ತಯಾರಿ ಮಾಡಿ ಮಕ್ಕಳಿಗೆ ನೆರವು ನೀಡುತ್ತಾ ಬಂದ ಸಂಸ್ಥೆ ತನ್ನ ಕಾರ್ಯ ಚಟುವಟಿಕೆಗಳಿಗೆ ತೆರೆ ಎಳೆದದ್ದೂ ಹಲವರಿಗೆ ಗೊತ್ತಾಗಲಿಲ್ಲ. ಪರವಾಗಿಲ್ಲ. ಈಗ ಬೆಂಗಳುರಿನಲ್ಲಿ ಅದರ ಶಾಖೆಯೊಂದು ತಲೆಯೆತ್ತಿ ನಿಂತಿದೆ. ಇದು ಮುಂಬೈ ಸಂಗೀತಾಭಿ ಮಾನಿಗಳಿಗೆ ಬಹಳ ಖುಷಿತರುವ ಸುದ್ದಿ. -ಹಿತೈಷಿಗಳು ಹಾಗೂ ಸಂಗೀತ ಪ್ರಿಯರು. 2014   http://creative.sulekha.com/shri-purundaradasa-and-thyagaraja-aradhana-at-dombivili-maharashtra_553359_blog

ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಶ್ರೀಮತಿ ವಿದುಷಿ ಉಮಾ ನಾಗಭೂಷಣರಿಗೆ !

Image
ಕರ್ನಾಟಕ ಸರ್ಕಾರದ  ಕನ್ನಡ ಮತ್ತು ಸಾಂಸ್ಕೃತಿಕ ವಿಭಾಗದ ಮಂತ್ರಿ,ಶ್ರೀ ಗೋವಿಂದ ಕರಜೋಲ,                          ಮಹಾರಾಷ್ಟ್ರದ ಡೊಂಬಿವಲಿಯ ಮೈಸೂರು ಸಂಗೀತ ವಿದ್ಯಾಲಯದ ಪ್ರಾಂಶುಪಾಲೆ,                                             ಶ್ರೀಮತಿ ವಿದುಷಿ,  ಉಮಾ ನಾಗಭೂಷಣರಿಗೆ,  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ೨೦೧೨ ರ ನವೆಂಬರ್,೨೪ ರಂದು, ಆಹ್ವಾನಿತ ಶ್ರೋತೃಗಳು ಹಾಗೂ ಗಣ್ಯರ ಸಮ್ಮುಖದಲ್ಲಿ  'ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕರ್ನಾಟಕ ಕಲಾಶ್ರೀ ಪ್ರಶಸ್ತಿ'  ಯನ್ನು ಪ್ರದಾನಮಾಡಿದರು. ಚಿತ್ರದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯ  ಅಧ್ಯಕ್ಷೆ, ಶ್ರೀಮತಿ ವೈಜಯಂತಿ ಕಾಶಿ, ಕನ್ನಡ ಸಂಸ್ಕೃತಿ ವಿಭಾಗ ಕಮೀಶನರ್, ಶ್ರೀ ರಾಮಕೃಷ್ಣ, ಹಾಗೂ ಅಕ್ಯಾಡೆಮಿ ರಿಜಿಸ್ಟ್ರಾರ್, ಶ್ರೀಮತಿ ಭಾಗ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು. Sangeeta Nritya Academy awards announced SPECIAL CORRESPONDENT SHARE   ·    COMMENT    ·    PRINT    ·    T+    TOPICS Karnataka Bangalore arts, culture and entertainment dance music Karnataka Sangeeta Nritya Academy has announced its annual awards for the 2011-12 and 2012-13. Honorary awards for 2011-12 have been conferred on :        Hindustani

ವಿದುಷಿ . ಉಮಾ ನಾಗಭೂಷಣರಿಗೆ, ಮುಂಬೈ ಕರ್ನಾಟಕ ಸಂಘ ಪ್ರದಾನಿಸುವ, ಪ್ರತಿಶ್ಠಿತ ಸಾಧನ ಶಿಖರ ಪ್ರಶಸ್ತಿ

Image
ಈ ಸಮಯದಲ್ಲಿ ಹಾಜರಿದ್ದ ಗಣ್ಯರು,  ಡಾ. ಜೆ.ಬಿ.ಜೋಶಿ, ಶ್ರೀ. ಬಿ.ಎ.ಸನದಿ, ಡಾ. ನರಹಳ್ಳಿ ಸುಬ್ರಹ್ಮಣ್ಯ, ಡಾ. ಭರತ್ ಕುಮಾರ್ ಪೊಲಿಪು, ಮತ್ತು, ಶ್ರೀ.  ಓಂದಾಸ ಕಣ್ಣಂಗಾರ್, ಡಾ. ಬಿ.ಆರ್. ಮಂಜುನಾಥ್, ಡಾ. ಸಂಜೀವ ಶೆಟ್ಟಿ,  ಮೊದಲಾದವರು.

ಮುಂಬೈ ಕನ್ನಡ ಸಂಘದ ಅಮೃತೋತ್ಸವದ ಸಮಾರೋಪ ಸಮಾರಂಭ !

Image
'ಮುಂಬೈ ಕನ್ನಡ ಸಂಘದ ಅಮೃತೋತ್ಸವ ಸಮಾರೋಪ ಸಮಾರಂಭ'ದಲ್ಲಿ ಮುಂಬೈನ ಹಲವಾರು ಸಾಧಕರನ್ನು ಆಹ್ವಾನಿಸಿ  ಗೌರವಿಸಲಾಯಿತು.  ಅವರಲ್ಲಿ ವಿದುಷಿ. ಉಮಾ ನಾಗಭೂಷಣ, ಹಾಗೂ, 'ಶ್ರೀ. ನಾಗಭೂಷಣ್,'  ಮುಖ್ಯರು.

ಸನ್. ೨೦೧೨ ರ ಸಾಲಿನ, 'ಶ್ರೀ. ಪುರುಂದರದಾಸರ ಮತ್ತು ಶ್ರೀ. ತ್ಯಾಗರಾಜರ ಆರಾಧನಾ ಮಹೋತ್ಸವ', 'ಡೊಂಬಿವಲಿಯ, ಮೈಸೂರ್ ಸಂಗೀತ ವಿದ್ಯಾಲಯ' ದಲ್ಲಿ ! !

Image
        ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಲಿಯ ಮೈಸೂರು ಸಂಗೀತ ವಿದ್ಯಾಲಯ(ರಿ) ಆಯೋಜಿಸಿದ, ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ, ಡೊಂಬಿವಲಿ ಪೂರ್ವದಲ್ಲಿರುವ ಗಾಂಧಿನಗರದ 'ಧರ್ಮವೀರ ಆನಂದ ದಿಘೆ                                      ಸಭಾಗೃಹ’  ದಲ್ಲಿ,  ೨೦೧೨ ರ ಫೆಬ್ರವರಿ, ೫ ನೆಯ ತಾರೀಖು, ಭಾನುವಾರ ಮುಂಜಾನೆ  ೯-೩೦ ಗಂಟೆಗೆ ಆರಂಭಗೊಂಡು ಸಾಯಂಕಾಲ ೬-೪೫ ಕ್ಕೆ ಕೊನೆಗೊಂಡಿತು. ಆಗಮಿಸಿದ  ಮುಖ್ಯ ಅತಿಥಿಗಳು : ಶ್ರೀ. ಎಚ್.ಬಿ.ಎಲ್.ರಾವ್,( ಮಹಾರಾಷ್ಟ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, (ಕೆಲಸದ ಒತ್ತಡದಿಂದ ಅವರಿಗೆ ಬರಲಾಗಲಿಲ್ಲ) ಗೌರವಾನ್ವಿತ ಅತಿಥಿ ಶ್ರೀ ಸತೀಶ್ ಎನ್. ನಾಯಕ್,  (Chief/Gen Manager, Head, Finance & Banking Onida Group of Companies) ಕಾರ್ಯಕ್ರಮದ ಮೊದಲಿಗೆ, ವಿದ್ಯಾಲಯದ ಕಿರಿಯ, ಹಿರಿಯ ಹಾಗೂ ಪ್ರೌಢ ವಿದ್ಯಾರ್ಥಿಗಳು ಶ್ರೀ. ಪುರುಂದರದಾಸರ ಹಾಗೂ ಶ್ರೀ. ತ್ಯಾಗರಾಜರ ಕೃತಿಗಳನ್ನೂ ಸುಶ್ರಾವ್ಯವಾಗಿ ಸಭೆಯ ಮುಂದೆ ಪ್ರಸ್ತುತಪಡಿಸಿದರು. * ಮೈ.ಸಂ.ವಿ. ದಲ್ಲಿ  ಸಂಗೀತ ಶಾಸ್ತ್ರವನ್ನು ಅಭ್ಯಾಸ ಮಾಡುತ್ತಿರುವ ಮಕ್ಕಳು ಪ್ರಸ್ತುತಪಡಿಸಿದ ಕಾರ್ಯಕ್ರಮಗಳು : -ತವದಾಸೋಹಂ ದಾಶರಥೆ -ಪನ್ನಗಾಧಿಪತಿ ಶ್ರೀಪತಿ -ಎರಡನೆಯ ಬ್ಯಾಚ್ : -ಸುಜನ ಜೀವನ ರಾಮ ಸುಗುಣ ಭೂಷಣ -ನಾರಸಿಂಹನೆಂಬ ದೇವನು -ಜೂನಿಯರ್ ವಿದ್ಯಾರ್ಥಿಗಳು ಪರೀಕ್ಷೆ