ಮುಂಬಯಿಯ ಮೈಸೂರ್ ಸಂಗೀತ ವಿದ್ಯಾಲಯ ದೊಂಬಿವಲಿಯ ಆಡಳಿತಾಧಿಕಾರಿ ಶ್ರೀ. ಬಿ. ನಾಗಭೂಷಣ್ ಇನ್ನಿಲ್ಲ !

ಮುಂಬಯಿಯ ಮೈಸೂರ್ ಸಂಗೀತ ವಿದ್ಯಾಲಯ ದೊಂಬಿವಲಿಯ ಆಡಳಿತಾಧಿಕಾರಿ ಶ್ರೀ. ಬಿ. ನಾಗಭೂಷಣ್ ಇನ್ನಿಲ್ಲ !

ನನ್ನ ಆತ್ಮೀಯ ಗೆಳೆಯ, ಹಾಗೂ ಮುಂಬೈ ಕನ್ನಡಿಗರ ಪ್ರೀತಿಯ ನಾಗಭೂಷಣ್, 10 ಆಗಸ್ಟ್, ೨೦೧೭ ರಂದು ಬೆಂಗಳೂರಿನಲ್ಲಿ ನಿಧನರಾದರು. ಸದಾ ಹಸನ್ಮುಖಿ, ಹಾಗು ಒಳ್ಳೆಯ ಸಂಘಟಕ ಮತ್ತು ಸಹೃದಯಿ !

ಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ  :

೧೯೮೨ ರಲ್ಲಿ ಮುಂಬಯಿನ ಹೆಸರಾಂತ ವೀಣಾ ವೈಣಿಕ, ಶ್ರೀ. ಶಂಕರನಾರಾಯಣ ರಾಯರ ಆಶೀರ್ವಾದದಿಂದ ಕರ್ನಾಟಕ ಸಂಗೀತ  ವಿದುಷಿ. ಉಮಾ ನಾಗಭೂಷಣ್ ಹಾಗೂ ನಾಗಭೂಷಣ್ ದಂಪತಿಗಳು ಡೊಂಬಿವಲಿಯಲ್ಲಿ  ಮೈಸೂರು ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು.  ಇಲ್ಲಿ ಮಕ್ಕಳಿಗೆ, ಯುವಕರಿಗೆ, ಹಾಗು ಸಂಗೀತಾಭಿಲಾಷಿಗಳಿಗೆಲ್ಲಾ ಸಂಗೀತ ಕಲಿಸಲು ಆರಂಭಿಸಿದರು. ಬೆಂಗಳೂರಿನ ಸಂಗೀತ ಪರೀಕ್ಷಾ ಕೇಂದ್ರದಲ್ಲಿ  ಮುಂಬಯಿನ ಉಮನಾಗಭೂಷಣ್ ರವರ ವಿದ್ಯಾರ್ಥಿಗಳು ಭಾಗವಹಿಸಿ, ಪದವಿ ಪಡೆಯುತ್ತಿದ್ದರು.  ಈ ವಿದ್ಯಾರ್ಥಿಗಳಿಗೆ ಸಂಗೀತದ ಪ್ರಶಿಕ್ಷಣವನ್ನು ಉಮಾರವರು ಕೊಡುತ್ತಿದ್ದರು. ನಾಗಭೂಷರು, ಈ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಪರೀಕ್ಷೆ ಕೇಂದ್ರಕ್ಕೆಕರೆದುಕೊಂಡು ಹೋಗಿ, ಪರೀಕ್ಷೆ  ಮುಗಿದ ಬಳಿಕ ಅವರನ್ನು ಮುಂಬಯಿಗೆ ಕ್ಷೇಮವಾಗಿ ಕರೆದುಕೊಂಡು ಬರುವ ಗುರುತಗರ ಜವಾಬ್ದಾರಿಯನ್ನು ಹಲವು ದಶಕಗಳ ಕಾಲ ಅತ್ಯಂತ ಸಮರ್ಪಕವಾಗಿ ನಿಭಾಯಿಸಿದರು. ಈಗ ಮುಂಬಯಿನಲ್ಲೇ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ.  

ನಾಗಭೂಷಣ್ ತಮ್ಮ ಪತ್ನಿ ವಿದುಷಿ, ಶ್ರೀಮತಿ. ಉಮಾ ನಾಗಭೂಷಣರಿಗೆ ಅವರ ಬಲಗೈ ನಂತಿದ್ದರು. ಪತಿ ಪತ್ನಿಯರು ಜೊತೆಗೂಡಿ ಮುಂಬಯಿಯ ಉಪನಗರ ಡೊಂಬಿವಲಿಯಲ್ಲಿ ಮೈಸೂರ್ ಸಂಗೀತ ವಿದ್ಯಾಲಯವನ್ನು ಹಲವು ದಶಕಗಳ ಕಾಲ ಅತ್ಯುತ್ತಮವಾಗಿ  ನಡೆಸಿಕೊಂಡು ಬಂದರು.


ಪುರಂದರದಾಸ, ತ್ಯಾಗರಾಜ ಜಯಂತ್ಯೋತ್ಸಗಳ ಆಯೋಜನೆ :

ಪುರಂದರದಾಸ, ತ್ಯಾಗರಾಜ ಜಯಂತ್ಯೋತ್ಸಗಳನ್ನು ಹಲವಾರು ವರ್ಷಗಳ ಕಾಲ ಚೆನ್ನಾಗಿ ಆಯೋಜಿಸಿದ್ದರು. ಬೆಂಗಳೂರಿನಿಂದ ಗಾಯಕರನ್ನು ಆಹ್ವಾನಿಸುವುದರ ಜೊತೆಗೆ, ಕರ್ನಾಟಕ ಸಂಗೀತದ ಕಮ್ಮಟಗಳನ್ನು ನಡೆಸುತ್ತಿದ್ದದ್ದು ಅವರ ವಿಶೇಷತೆಗಳಲ್ಲೊಂದಾಗಿತ್ತು. ನಗರದಲ್ಲಿ ಹಲವಾರು ಸಂಗೀತ ಕಚೇರಿಗಳನ್ನು ಆಯೋಜಿಸಿದ ಹೆಗ್ಗಳಿಕೆ ಈ ದಂಪತಿಗಳದು.  ಈ ಸಮಾರಂಭದಲ್ಲಿ ಹಾಡಲು ಭಾಗವಹಿಸುತ್ತಿದ್ದ ಮೇರು ಕಲಾವಿದರಲ್ಲಿ ಡಾ. ಸುಕನ್ಯಾ ಪ್ರಭಾಕರ್, ಡಾ. ಸತ್ಯವತಿ, ಡಾ. ಆರ್. ಪದ್ಮನಾಭನ್ ಮೊದಲಾದವರು ಪ್ರಮುಖರು.  

ಶ್ರೀ. ನಾಗಭೂಷಣ ಹಾಗೂ ಶ್ರೀಮತಿ ಉಮಾ ನಾಗಭೂಷಣ ದಂಪತಿಗಳು :  

ನವದೆಹಲಿಯಲ್ಲಿ ಆಯೋಜಿಸಲಾದ ೨೬ ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಶ್ರೀ. ನಾಗಭೂಷಣ್ ಭಾಷಣ ಮಾಡುತ್ತಿರುವುದು.

     ಗಾನ ಕಲಾ ವಿಶಾರದ ವಿದ್ವಾನ್ ಡಾ. ಪದ್ಮನಾಭರವರ ಜೊತೆಯಲ್ಲಿ ವೇದಿಕೆಯ ಮೇಲೆ  !


ಮುಂಬಯಿ ಕನ್ನಡ ಸಂಘ ಆಯೋಜಿಸುತ್ತಿದ್ದ ಶ್ರೀ ಪುರಂದರ ದಾಸರ ಕೀರ್ತನೆಗಳನ್ನು ಸಂಗೀತ ರೂಪದಲ್ಲಿ ಹಾಡಿಸುವ ಮಕ್ಕಳ ಕಾರ್ಯಕ್ರಮ :

ಮುಂಬಯಿ ಕನ್ನಡ ಸಂಘ ಆಯೋಜಿಸುತ್ತಿದ್ದ ಶ್ರೀ ಪುರಂದರ ದಸರ ಕೀರ್ತನೆಗಳನ್ನು ಸಂಗೀತ ರೂಪದಲ್ಲಿ ಹಾಡಿಸುವ ಮಕ್ಕಳ ಕಾರ್ಯಕ್ರಮದಲ್ಲಿ ಉಮಾರವರು ಪ್ರತಿವರ್ಷವೂ ತಪ್ಪದೆ ಪಾಲ್ಗೊಂಡು ತೀರ್ಪುಗಾರರಾಗಿ  ನಿರ್ವಹಿಸು ಸುತ್ತಿದ್ದಾಗ ನಾಗಭೂಷಣರು ಸಹಾಯಕರಾಗಿ ನಮ್ಮ ಅನುಪಮ ಸೇವೆಯನ್ನು ಮಾಡುತ್ತಿದ್ದರು 

ಮಾಟುಂಗದಲ್ಲಿರುವ  'ಮುಂಬಯಿ ಕನ್ನಡ ಸಂಘದ  ಪ್ಲಾಟಿನಂ ಜ್ಯುಬಿಲೀ ಸಮಾರಂಭ'ದ ಸಮಯದಲ್ಲಿ ನಾಗಭೂಷಣ ದಂಪತಿಗಳನ್ನು ಗೌರವಿಸಲಾಯಿತು 


ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸವದ ಸಮಯದಲ್ಲಿ (೨೦೧೦-೧೧) 

ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸವದ ಸಮಯದಲ್ಲಿ (೨೦೧೦-೧೧)  ಡಾ. ನಿಸ್ಸಾರ್ ಅಹ್ಮದ್ ರವರ ಜೊತೆಯಲ್ಲಿ. ಶ್ರೀ. ಗುರುರಾಜ್ ನಾಯಕ್ ಮತ್ತು ಪದಾಧಿಕಾರಿಗಳ ಜೊತೆಯಲ್ಲಿ 

೨೦೧೦ ರಲ್ಲಿ ಬೆಂಗಳೂರಿಗೆ ಹೋದರು  :

ನಾಗಭೂಷಣ್ ದಂಪತಿಗಳು ತಮ್ಮ ದೊಂಬಿವಿಲಿಯ ಮೈಸೂರ್ ಸಂಗೀತ ವಿದ್ಯಾಲಯವನ್ನು ನಿಲ್ಲಿಸಿ, ಬೆಂಗಳೂರಿಗೆ ಹೋಗಿ ನೆಲೆಸಿದರು. ಇದು ಅವರ ವೈಯಕ್ತಿಕ ಆಸಕ್ತಿಯಿಂದ ಎನ್ನುವ ವಿಷಯ ತಿಳಿಸಿದರು. ಯಾರಿಗೂ ಹೆಚ್ಚಿನ ಮಾಹಿತಿ ದೊರೆಯಲಿಲ್ಲ. ಬೆಂಗಳೂರಿನಲ್ಲೂ ಇದೇ ಹೆಸರಿನಲ್ಲಿ ಒಂದು ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ನಡೆಸುತ್ತಿದ್ದಾರೆ. 
೨೦೧೭ ರಲ್ಲಿ ನಿಧನ :

ಆದರೆ ವರ್ಷ ೨೦೧೭ ರ ಆಗಸ್ಟ್, ೧೦ ರಂದು, ಬೆಂಗಳೂರಿನಲ್ಲಿ ನಾಗಭೂಷಣರು ನಿಧನರಾದರು. ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. 

ಮುಂಬಯಿ ಕನ್ನಡಿಗರ ಪರವಾಗಿ ನಾನು ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.  ಶ್ರೀಮತಿ ಉಮಾ ನಾಗಭೂಷಣರಿಗೆ ಈ ನಷ್ಟವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ.  

-ಎಚ್. ಆರ್. ಎಲ್



Comments

Shri. Nagabhushana and Smt. Uma nagabhushana are known to kannada people through classical music and the related music programmes. Viz : Purunadara dasa aradhane, and Tyagaraja aradhana mahotsav. We have attended many programs, at Dombivli, Thane district

Popular posts from this blog

'ಮೈಸೂರು ಸಂಗೀತ ವಿದ್ಯಾಲಯ, ದೊಂಬಿವಲಿ', ಆಯೋಜಿಸಿದ್ದ, " ಶಂಕರ ವಿಜಯ," 'ಕಾವ್ಯವಾಚನ ಕಾರ್ಯಕ್ರಮ' ಯಶಸ್ವಿಯಾಗಿ ನೆರೆವೇರಿತು

ಸನ್. ೨೦೧೨ ರ ಸಾಲಿನ, 'ಶ್ರೀ. ಪುರುಂದರದಾಸರ ಮತ್ತು ಶ್ರೀ. ತ್ಯಾಗರಾಜರ ಆರಾಧನಾ ಮಹೋತ್ಸವ', 'ಡೊಂಬಿವಲಿಯ, ಮೈಸೂರ್ ಸಂಗೀತ ವಿದ್ಯಾಲಯ' ದಲ್ಲಿ ! !