Posts

Showing posts from March, 2009

೨೦೦೪ ನೇ ಇಸವಿಯಲ್ಲಿ, ಮಾಜಿ ಶ್ರೇಷ್ಟ ನ್ಯಾಯಾಧೀಶ, ಗಾಂಧಿವಾದಿ, ಸಮಾಜಸೇವಕ, ಶ್ರೀ. ನಿಟ್ಟೂರು ಶ್ರೀನಿವಾಸರಾಯರ ಸಂದೇಶ !

Image
ಮೈಸೂರಿನ ಹಿರಿಯ ಚೇತನ, ನಿವೃತ್ತ, ನ್ಯಾಯಾಧೀಶ, ನಿಟ್ಟೂರು ಶ್ರೀನಿವಾಸರಾಯರ ಬಗ್ಗೆ ತಿಳಿಯುವುದು ಅತ್ಯಂತ ಆವಶ್ಯಕ. ಇಂದಿನ ಯುವಕರು ಅವರ ಮೌಲ್ಯಯುತವಾದ ಜೀವನ ಚರಿತ್ರೆಯನ್ನು ಖಂಡಿತ ಓದಬೇಕು. ಗಾಂಧಿವಾದಿ, ಮೈಸೂರಿನ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ತಮ್ಮ ಕಾರ್ಯಾವಧಿಯ ಸಮಯದಲ್ಲಿ ಎಲ್ಲರಿಗೂ ಮಾದರಿಯಾದ ಹಲವಾರು ಸಮಾಜಸೇವಾ ಕಾರ್ಯಗಳನ್ನು ಅತ್ಯಂತ ಶ್ರದ್ಧೆ, ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಿ, ಹೆಸರು ಸಂಪಾದಿಸಿದ್ದರು. ಅಂತಹ ಮಹನೀಯರು ಒಳ್ಳೆಯಕಾರ್ಯಮಾಡುವ ಎಲ್ಲರನ್ನೂ, ಪ್ರೋತ್ಸಾಹಿಸುತ್ತಿದ್ದರು. ಬೊಂಬಾಯಿನ, ಉಮಾ ನಾಗಭೂಷಣ ದಂಪತಿಗಳ " ಸಂಗೀತ ಜ್ಞಾನದಾಸೋಹ " ವನ್ನು ಅವರು ಮನಸಾರೆ ಮೆಚ್ಚಿಕೊಂಡು, ತಮ್ಮ ಶುಭಾಶೀರ್ವಚನಗಳನ್ನು ಅಂಚೆಯಲ್ಲಿ ಕಳಿಸಿಕೊಟ್ಟಿದ್ದರು......

ಶ್ರೀಮತಿ. ಉಮಾನಾಗಭೂಷಣರ ವಿದ್ಯಾರ್ಹತೆಗಳು , ಹಾಗೂ ಅವರ ವಿದ್ಯಾಲಯ ಮುಂದೆನಡೆದು ಸಾಧಿಸಿದ ಮೈಲಿಗಲ್ಲುಗಳು,

Image
’ಮೈಸೂರು ಸಂಗೀತ ವಿದ್ಯಾಲಯ ’ ದ ಬೆಳವಣಿಗೆಯ ಹಲವು ಹಂತಗಳನ್ನೂ, ಆಶಯಗಳನ್ನೂ ಇಲ್ಲಿ ದಾಖಲಿಸಲಾಗಿದೆ. ಉಮಾರವರು ಹಮ್ಮಿಕೊಂಡ ಹಲವಾರು ಸಂಗೀತ ಕಛೇರಿಗಳ ವಿಸ್ತ್ರುತ ವಿವರಣೆಯನ್ನು ನಾವು ಕಾಣಬಹುದು.

ಸಂಗೀತ, ವಿದುಷಿ, ಉಮಾರವರಿಗೆ ವೃತ್ತಿಗಿಂತಲೂ ಪ್ರವೃತ್ತಿಯೆಂದು ಹೇಳಬಹುದು !

Image
ಶ್ರೀಮತಿ. ಉಮಾನಾಗಭೂಷಣರು, ಮನೆಯಲ್ಲಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ಮನೆಯನ್ನು ಅಚ್ಚುಕಟ್ಟಾಗಿ ಸಜಾಯಿಸುವುದು, ಪ್ರಮುಖ ಕಾರ್ಯಗಳಲ್ಲೊಂದು. ಏಕೆಂದರೆ, ಮುಂಬೈ ನ ಪುಟ್ಟಮನೆಯಲ್ಲಿ, ತಮಗೆ ಬಂದಿರುವ ಪ್ರಶಸ್ತಿಗಳು, ಬಿನ್ನವತ್ತಳೆಗಳು, ಪ್ರಶಸ್ತಿಪತ್ರಗಳು ಟ್ರೋಫಿಗಳು ಇತ್ಯಾದಿಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿ ಅದನ್ನು ಅಚ್ಚುಕಟ್ಟಾಗಿ ಪ್ರದರ್ಶಿಸುವುದೂ ಒಂದು ಕಲೆಯೇ ! ಪತಿ, ಶ್ರೀ ನಾಗಭೂಷಣರು ತಮ್ಮ ಕಚೇರಿಯ ಕೆಲಸದ ಬಳಿಕ, ಮೈಸೂರು ಸಂಗೀತ ವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಸದಾ ಆಸಕ್ತರು. ಸತಿ-ಪತಿಗಳ ನಿರಂತರ ಅವಿಶ್ರಾಂತ ಕಾರ್ಯಚಟುವಟಿಗೆಗಳ ಫಲಸ್ವರೂಪದಿಂದ ಈ ಸಂಸ್ಥೆ ತಲೆಯೆತ್ತಿನಿಂತಿದೆ.

(೧೯೮೨-೨೦೦೮) ಮೈಸೂರು ಸಂಗೀತ ವಿದ್ಯಾಲಯ, ನಡೆದುಬಂದ ದಾರಿಯ ಹೆಚ್ಚೆಗುರುತುಗಳು !

Image
ಮೈಸೂರು ಸಂಗೀತ ವಿದ್ಯಾಲಯದ ಬಗ್ಗೆ ಕೆಲವು ಮಾಹಿತಿಗಳು :

" ಮೈಸೂರು ಸಂಗೀತ ವಿದ್ಯಾಲಯದ ರಜತಮಹೋತ್ಸವ " ದ ಸಂದರ್ಭದಲ್ಲಿ ರಚಿಸಿದ, ವಿಶೇಷ ಕಮಿಟಿ !

Image
ಹೊರನಾಡಿನ ಅನೇಕ ವೈವಿಧ್ಯಪೂರ್ಣ ಸಂಗೀತಾಸಕ್ತರ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಉಮಾನಾಗಭೂಷಣ, ಹಾಗೂ ನಾಗಭೂಷಣರು ತಮ್ಮ ಸಂಗೀತವಿದ್ಯಾಭ್ಯಾಸದ ಕಾರ್ಯವಿಧಿಗಳನ್ನು ನಿಯೋಜಿಸಿ ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ಸಂಗೀತ ಸಾರ್ವಭೂಮ, ತ್ಯಾಗರಾಜರ ಜೊತೆಗೆ, ಕರ್ನಾಟಕ ಸಂಗೀತ ಪಿತಾಮಹ, ಪುರುಂದರದಾಸರ ಆರಾಧನಾ ಮಹೋತ್ಸವಗಳನ್ನು ಪ್ರತಿವರ್ಷವೂ ತಪ್ಪದೆ ನಡೆಸಿಕೊಂಡು ಬಂದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿಗೆ, ಕರ್ನಾಟಕದ ಹೆಸರಾಂತ ಗಾನವಿದುಷಿಯರಾದ, ಡಾ. ಟಿ. ಎಸ್. ಸತ್ಯವತಿ, ಮುಂತಾದವರು ಬಂದು, ’ಸಂಗೀತ ಕಾರ್ಯಾಗಾರ ’ ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.