Posts

’ವರ್ಷದ ಕಲಾವಿದರು, ಪ್ರಶಸ್ತಿ’, ’ಬೆಂಗಳೂರು ಗಾಯನಸಮಾಜ” ದಿಂದ !

Image
ಪ್ರತಿಷ್ಟಿತ ಗಾಯನ ಸಮಾಜ, ಬೆಂಗಳೂರು, ಶ್ರೀಮತಿ. ಉಮಾ ನಾಗಭೂಷಣ್ ರಿಗೆ, ಹೊರನಾಡಿನಲ್ಲಿ ಅವರು ನಡೆಸುತ್ತಿರುವ ಸಂಗೀತ ಕೈಂಕರ್ಯವನ್ನು ಗುರುತಿಸಿ, ೧೧, ಅಕ್ಟೋಬರ್, ೨೦೦೯ ರಂದು, ಭಾನುವಾರ, ಬೆಳಿಗ್ಯೆ, ೧೦ ಗಂಟೆಗೆ ನಡೆದ, ೪೧ ನೆಯ ಸಂಗೀತ ಸಮ್ಮೇಳನದ ವಿದ್ವತ್ ಸಭೆ, " ಸದಸ್ " ನಲ್ಲಿ, " ವರ್ಷದ ಕಲಾವಿದರು " ಎಂದು ಗೌರವಿಸಲ್ಪಟ್ಟಿದ್ದಾರೆ. ಇದು ನಮ್ಮ ಮುಂಬೈ ಸಂಗೀತ ರಸಿಕರಿಗೆ, ಮತ್ತು ವಿದುಷಿ. ಉಮಾ ರವರ ನೂರಾರು ಸಂಗೀತದ ವಿದ್ಯಾರ್ಥಿಗಳಿಗೆ ಬಹು ಹೆಮ್ಮೆಯ ವಿಷಯವೆಂದು ತಿಳಿಸಲು ಹರ್ಷಿಸುತ್ತೇವೆ..... ಪರಮಾತ್ಮನು ವಿದುಷಿ. ಉಮಾನಾಗಭೂಷಣ್ ರವರಿಗೂ, ಹಾಗೂ ಅವರ ಪತಿ. ಶ್ರೀ. ನಾಗಭೂಷಣರಿಗೂ ಆಯುರಾರೋಗ್ಯ ಸಂಪತ್ತನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.

Ganapathy Pooja, at The Mysore Sangeetha vidyalaya, Dombivili !

Image
" ಶ್ರೀ ಮಹಾಗಣಪತಿ ವಾರ್ಷಿಕೋತ್ಸವ " ಪ್ರತಿಷ್ಠಾಪನೆ, ಪೂಜೆ, ಮತ್ತು ಆರತಿ. ಪ್ರಾಂಶುಪಾಲೆ, ವಿದುಷಿ, ಉಮಾನಾಗಭೂಷನ್ ಮತ್ತು ಶ್ರೀ. ನಾಗಭೂಷಣ್ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರು.... Lord Ganapathy Pooja, was conducted at The Mysore Sangeetha Vidyalaya, Dombivli. On Sunday, 23rd, August, 2009, * " Ganapathy Vigraha Pratishatapana function," was there, followed by Pooja, and Arathi. * Music by : Junior and Senior and Proficiency Studens of the Vidyalaya. On, Monday, 24th, August, 2009, * Music by the Students, of Mysore Sangeetha Vidyalaya. Under the headline, " shree Ganapathy Sangeetha Bhavaikya Malika" , (An Integration Programme , rendering 'Kritis of Lord Ganapathi', in various Indian languages), " *Chief Guest : Shri. Vishnu bhat C.A;  (Office bearer of 'Divine Park Trust') * Mahamangalarathi, * Ganapathy Visarjana, * Mahaprasada Viniyoga, * Sevartha by : * Successful candidates of Mysore Sangeetha Vidy...

Dombivli's ' Mysore Sangith Vidyalay,' bags the Award !

Image
(26th National Kannada Conference held at New-Delhi, presented the Award to ' The Mysore Sangith Vidyalay,' Dombivli, Mumbai, Maharashtra), ,ಇತ್ತೀಚೆಗೆ ಹೊಸ- ದೆಹಲಿಯಲ್ಲಿ ' ದೆಹಲಿ ಕನ್ನಡಿಗ ಪತ್ರಿಕೆ,' ಏರ್ಪಡಿಸಿದ್ದ, ’’೨೬ ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನ,’ ನಡೆದಾಗ, ಮುಂಬೈ ನ " ಉಪನಗರಿಯಲ್ಲಿರುವ ಡೊಂಬವಲಿಯ ಮೈಸೂರು ಸಂಗೀತ ವಿದ್ಯಾಲಯ " ಕ್ಕೆ "ಅತ್ಯುತ್ತಮ ಸಂಗೀತ ಶಿಕ್ಷಣ ಸಂಸ್ಥೆ " ಯೆಂಬ ಪ್ರಶಸ್ತಿಯನ್ನು ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ, ಪ್ರದಾನ ಮಾಡಲಾಯಿತು ! ತುಮಕೂರು ವಿಶ್ವವಿದ್ಯಾಲಯದ ಮಾಜೀ ಕುಲಪತಿ, ಪ್ರೊ. ಓ.ಅನಂತರಾಮಯ್ಯನವರು, ಶ್ರೀ ನಾಗಭೂಷಣರವರಿಗೆ ಶಾಲುಹೊದಿಸಿ ಸನ್ಮಾನಿಸುತ್ತಿದ್ದಾರೆ. 'ಬೆಂಗಳೂರಿನ ಕನ್ನಡಸಾಹಿತ್ಯ ಪರಿಷತ್ ನ ಅಧ್ಯಕ್ಷ, ' ಡಾ. ನಲ್ಲೂರ್ ಪ್ರಸಾದ್ ರವರು, ಮುಂಬೈನ 'ಮೈಸೂರು ಸಂಗೀತ ವಿದ್ಯಾಲಯ ' ಕ್ಕೆ, " ಬೆಸ್ಟ್ ಸಂಗೀತ ವಿದ್ಯಾಲಯ " ಸನ್ಮಾನದಿಂದ ಗೌರವಿಸಿದರು. ಶ್ರೀ ನಾಗಭೂಷಣರವರು, "ಪ್ರಶಸ್ತಿಪತ್ರ " ವನ್ನು ಸ್ವೀಕರಿಸುತ್ತಿದ್ದಾರೆ. (26th National Kannada Conference at New Delhi, ) ೨೬ ನೆಯ ರಾಷ್ಟ್ರೀಯ ಕನ್ನಡ ಕಾನ್ಫರೆನ್ಸ್ ಹೊಸ ದೆಹಲಿ ಯಲ್ಲಿ ಶ್ರೀ ನಾಗಭೂಷಣರು, ಸಿಂಪೋಸಿಯಮ್ ಒಂದರಲ್ಲಿ ಭಾಗವಹಿಸಿದಾಗ ತೆಗೆದ ಚಿ...

'ಮೈಸೂರು ಸಂಗೀತ ವಿದ್ಯಾಲಯ, ದೊಂಬಿವಲಿ', ಆಯೋಜಿಸಿದ್ದ, " ಶಂಕರ ವಿಜಯ," 'ಕಾವ್ಯವಾಚನ ಕಾರ್ಯಕ್ರಮ' ಯಶಸ್ವಿಯಾಗಿ ನೆರೆವೇರಿತು

ಮೈಸೂರು ಸಂಗೀತ ವಿದ್ಯಾಲಯ, ಡೊಂಬವಲಿಯವರು, ಕರ್ನಾಟಕ ಶಂಕರ ವಿಜಯ ಗಮಕವಾಚನವನ್ನು ಹೋದವಾರ, ಆಯೋಜಿಸಿದ್ದರು. ನವನವ ಕಾಳಿದಾಸ, ಕುಮಾರ ಸಂಭವ ಪೌರಾಣಿಕ ಶಿರೋಮಣಿ ಬಿರುದಾಂಕಿತ, ಆಸ್ಥಾನವಿದ್ವಾನ್ ಸಾಲಿಗ್ರಾಮ ಶ್ರೀಕಂಠಶಾಸ್ತ್ರಿ , ಗಳ ವಿರಚಿತ, ' ಕರ್ನಾಟಕ ಶಂಕರ ವಿಜಯ' ದ ಭಾಮಿನೀಷಟ್ಪದಿಯ ಗಮಕವಾಚನವನ್ನು ಗಮಕ ವಿದ್ವಾನ್. ಎಮ್. ಎ, ಜಯರಾಮರಾವ್ ರವರು ತಮ್ಮ ಮಧುರಕಂಠ, ವಿವಿಧ ರಾಗಗಳ ಸಂಯೋಜನೆ, ಸ್ಪುಟವಾದ ಸಾಹಿತ್ಯ ಉಚ್ಚಾರಣೆಗಳಿಂದ ಶ್ರೀ. ಶ್ರೀ. ಶಂಕರಾಚಾರ್ಯರ ಮತ್ತು ಶ್ರೀ. ಶ್ರೀ. ಮಂಡನಮಿಶ್ರರ ವಾಗ್ವಾದ ಭಾಗವನ್ನು ಪಾಂಡಿತ್ಯಪೂರ್ಣವಾಗಿ, ಎಲ್ಲಾ ವರ್ಗದ ಶ್ರೋತೃಗಳಿಗೂ ರುಚಿಸುವಂತೆ ವ್ಯಾಖ್ಯಾನಮಾಡಿದರು. ಕೇವಲ ಗಮಕ ವಾಚನವಲ್ಲದೆ ಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಸುಂದರ ವ್ಯಾಖ್ಯಾನ ಕಲೆಯಲ್ಲಿ ನಿಷ್ಣಾತರಾದ ರಾಯರ ಪ್ರತಿಭೆಗೆ, ಎಲ್ಲರೂ ಮನಸೋತರು. ಡೊಂಬಿವಲಿಯ, 'ಜಗದ್ಗುರು ಶ್ರೀ ಆದ್ಯ ಶಂಕರಾಚಾರ್ಯ ಸಮಿತಿ' ಯ ಅಧ್ಯಕ್ಷರಾದ ಎ. ಕೆ. ದೇಶಪಾಂಡೆ, ಉಪಾಧ್ಯಕ್ಷ ಎಚ್. ಎ. ಕುಲಕರ್ಣಿ, ಹಾಗೂ ಸಮಿತಿಯ ಸದಸ್ಯರು ಈ ಸಮಯದಲ್ಲಿ ಉಪಸ್ಥಿತರಿದ್ದರು. ಗಮಕ ವಿದ್ವಾನ್ ಜೈರಾಮ್ ರಾಯರಿಗೆ ಶಾಲುಹೊದಿಸಿ ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ, ’ಮೈಸೂರು ಸಂಗೀತ ವಿದ್ಯಾಲ” ದ ಪ್ರಾಂಶುಪಾಲರಾದ ಉಮಾನಾಗಭೂಷಣ ಹಾಗೂ ನಾಗಭೂಷಣ ದಂಪತಿಗಳಿಗೆ, ಶಾಲು ಹೊದಿಸಿ, ಫಲ-ಪುಷ್ಪಗಳನ್ನು ಸಮರ್ಪಿಸಿ ಸನ್ಮಾನಿಸಲಾಯಿತು.

೨೦೦೪ ನೇ ಇಸವಿಯಲ್ಲಿ, ಮಾಜಿ ಶ್ರೇಷ್ಟ ನ್ಯಾಯಾಧೀಶ, ಗಾಂಧಿವಾದಿ, ಸಮಾಜಸೇವಕ, ಶ್ರೀ. ನಿಟ್ಟೂರು ಶ್ರೀನಿವಾಸರಾಯರ ಸಂದೇಶ !

Image
ಮೈಸೂರಿನ ಹಿರಿಯ ಚೇತನ, ನಿವೃತ್ತ, ನ್ಯಾಯಾಧೀಶ, ನಿಟ್ಟೂರು ಶ್ರೀನಿವಾಸರಾಯರ ಬಗ್ಗೆ ತಿಳಿಯುವುದು ಅತ್ಯಂತ ಆವಶ್ಯಕ. ಇಂದಿನ ಯುವಕರು ಅವರ ಮೌಲ್ಯಯುತವಾದ ಜೀವನ ಚರಿತ್ರೆಯನ್ನು ಖಂಡಿತ ಓದಬೇಕು. ಗಾಂಧಿವಾದಿ, ಮೈಸೂರಿನ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ತಮ್ಮ ಕಾರ್ಯಾವಧಿಯ ಸಮಯದಲ್ಲಿ ಎಲ್ಲರಿಗೂ ಮಾದರಿಯಾದ ಹಲವಾರು ಸಮಾಜಸೇವಾ ಕಾರ್ಯಗಳನ್ನು ಅತ್ಯಂತ ಶ್ರದ್ಧೆ, ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಿ, ಹೆಸರು ಸಂಪಾದಿಸಿದ್ದರು. ಅಂತಹ ಮಹನೀಯರು ಒಳ್ಳೆಯಕಾರ್ಯಮಾಡುವ ಎಲ್ಲರನ್ನೂ, ಪ್ರೋತ್ಸಾಹಿಸುತ್ತಿದ್ದರು. ಬೊಂಬಾಯಿನ, ಉಮಾ ನಾಗಭೂಷಣ ದಂಪತಿಗಳ " ಸಂಗೀತ ಜ್ಞಾನದಾಸೋಹ " ವನ್ನು ಅವರು ಮನಸಾರೆ ಮೆಚ್ಚಿಕೊಂಡು, ತಮ್ಮ ಶುಭಾಶೀರ್ವಚನಗಳನ್ನು ಅಂಚೆಯಲ್ಲಿ ಕಳಿಸಿಕೊಟ್ಟಿದ್ದರು......

ಶ್ರೀಮತಿ. ಉಮಾನಾಗಭೂಷಣರ ವಿದ್ಯಾರ್ಹತೆಗಳು , ಹಾಗೂ ಅವರ ವಿದ್ಯಾಲಯ ಮುಂದೆನಡೆದು ಸಾಧಿಸಿದ ಮೈಲಿಗಲ್ಲುಗಳು,

Image
’ಮೈಸೂರು ಸಂಗೀತ ವಿದ್ಯಾಲಯ ’ ದ ಬೆಳವಣಿಗೆಯ ಹಲವು ಹಂತಗಳನ್ನೂ, ಆಶಯಗಳನ್ನೂ ಇಲ್ಲಿ ದಾಖಲಿಸಲಾಗಿದೆ. ಉಮಾರವರು ಹಮ್ಮಿಕೊಂಡ ಹಲವಾರು ಸಂಗೀತ ಕಛೇರಿಗಳ ವಿಸ್ತ್ರುತ ವಿವರಣೆಯನ್ನು ನಾವು ಕಾಣಬಹುದು.

ಸಂಗೀತ, ವಿದುಷಿ, ಉಮಾರವರಿಗೆ ವೃತ್ತಿಗಿಂತಲೂ ಪ್ರವೃತ್ತಿಯೆಂದು ಹೇಳಬಹುದು !

Image
ಶ್ರೀಮತಿ. ಉಮಾನಾಗಭೂಷಣರು, ಮನೆಯಲ್ಲಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ಮನೆಯನ್ನು ಅಚ್ಚುಕಟ್ಟಾಗಿ ಸಜಾಯಿಸುವುದು, ಪ್ರಮುಖ ಕಾರ್ಯಗಳಲ್ಲೊಂದು. ಏಕೆಂದರೆ, ಮುಂಬೈ ನ ಪುಟ್ಟಮನೆಯಲ್ಲಿ, ತಮಗೆ ಬಂದಿರುವ ಪ್ರಶಸ್ತಿಗಳು, ಬಿನ್ನವತ್ತಳೆಗಳು, ಪ್ರಶಸ್ತಿಪತ್ರಗಳು ಟ್ರೋಫಿಗಳು ಇತ್ಯಾದಿಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿ ಅದನ್ನು ಅಚ್ಚುಕಟ್ಟಾಗಿ ಪ್ರದರ್ಶಿಸುವುದೂ ಒಂದು ಕಲೆಯೇ ! ಪತಿ, ಶ್ರೀ ನಾಗಭೂಷಣರು ತಮ್ಮ ಕಚೇರಿಯ ಕೆಲಸದ ಬಳಿಕ, ಮೈಸೂರು ಸಂಗೀತ ವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಸದಾ ಆಸಕ್ತರು. ಸತಿ-ಪತಿಗಳ ನಿರಂತರ ಅವಿಶ್ರಾಂತ ಕಾರ್ಯಚಟುವಟಿಗೆಗಳ ಫಲಸ್ವರೂಪದಿಂದ ಈ ಸಂಸ್ಥೆ ತಲೆಯೆತ್ತಿನಿಂತಿದೆ.