’ವರ್ಷದ ಕಲಾವಿದರು, ಪ್ರಶಸ್ತಿ’, ’ಬೆಂಗಳೂರು ಗಾಯನಸಮಾಜ” ದಿಂದ !
ಪ್ರತಿಷ್ಟಿತ ಗಾಯನ ಸಮಾಜ, ಬೆಂಗಳೂರು, ಶ್ರೀಮತಿ. ಉಮಾ ನಾಗಭೂಷಣ್ ರಿಗೆ, ಹೊರನಾಡಿನಲ್ಲಿ ಅವರು ನಡೆಸುತ್ತಿರುವ ಸಂಗೀತ ಕೈಂಕರ್ಯವನ್ನು ಗುರುತಿಸಿ, ೧೧, ಅಕ್ಟೋಬರ್, ೨೦೦೯ ರಂದು, ಭಾನುವಾರ, ಬೆಳಿಗ್ಯೆ, ೧೦ ಗಂಟೆಗೆ ನಡೆದ, ೪೧ ನೆಯ ಸಂಗೀತ ಸಮ್ಮೇಳನದ ವಿದ್ವತ್ ಸಭೆ, " ಸದಸ್ " ನಲ್ಲಿ, " ವರ್ಷದ ಕಲಾವಿದರು " ಎಂದು ಗೌರವಿಸಲ್ಪಟ್ಟಿದ್ದಾರೆ. ಇದು ನಮ್ಮ ಮುಂಬೈ ಸಂಗೀತ ರಸಿಕರಿಗೆ, ಮತ್ತು ವಿದುಷಿ. ಉಮಾ ರವರ ನೂರಾರು ಸಂಗೀತದ ವಿದ್ಯಾರ್ಥಿಗಳಿಗೆ ಬಹು ಹೆಮ್ಮೆಯ ವಿಷಯವೆಂದು ತಿಳಿಸಲು ಹರ್ಷಿಸುತ್ತೇವೆ.....
ಪರಮಾತ್ಮನು ವಿದುಷಿ. ಉಮಾನಾಗಭೂಷಣ್ ರವರಿಗೂ, ಹಾಗೂ ಅವರ ಪತಿ. ಶ್ರೀ. ನಾಗಭೂಷಣರಿಗೂ ಆಯುರಾರೋಗ್ಯ ಸಂಪತ್ತನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.
Comments