Posts

ಸನ್. ೨೦೧೧ ರ ಸಾಲಿನ, ಡೊಂಬಿವಿಲಿಯ, ಮೈಸೂರು ಸಂಗೀತ ವಿದ್ಯಾಲಯದಲ್ಲಿ, ಪುರುಂದರದಾಸರ ಹಾಗೂ ತ್ಯಾಗರಾಜರ ಆರಾಧನಾ ಮಹೋತ್ಸವವನ್ನು ಆಚರಿಸಲಾಯಿತು

Image
ಕಾರ್ಯಕ್ರಮಗಳ ವಿವಿರ :

ಪ್ರತಿಶ್ಠಿತ ಫಾಲ್ಕೆ ಪ್ರಶಸ್ತಿ ವಿಜೇತ, ಶ್ರೀ ವಿ. ಕೆ. ಮೂರ್ತಿಯವರನ್ನು ಮುಂಬೈ ಜನತೆ ಗೌರವಿಸಿತು !

Image
ಡೊಂಬಿವಲಿಯಲ್ಲಿರುವ ಹಿರಿಯ ಸಂಗೀತ ಶಿಕ್ಷಣ ಸಂಸ್ಥೆ, ’ ಮೈಸೂರ್ ಸಂಗೀತ ವಿದ್ಯಾಲಯ ’ ದ ಪ್ರಾಂಶುಪಾಲೆ, ವಿದುಷಿ, ಶ್ರೀಮತಿ. ಉಮಾನಾಗಭೂಷಣ್,  ಮತ್ತು ಅವರ ಪತಿ,  ಸಹ-ಪ್ರಿನ್ಸಿಪಾಲ್, ಶ್ರೀ. ನಾಗಭೂಷಣ್ ರವರು ವಿ. ಕೆ. ಮೂರ್ತಿಯವರನ್ನು ಅಭಿನಂದಿಸಿ ಗೌರವಿಸಿದರು.... ಸುಂದರವಾಗಿ ಹೊರತಂದ,  ಆಹ್ವಾನ ಪತ್ರಿಕೆ, ಮುಂಬೈ ಕನ್ನಡ ಸಂಘದ ಅಧ್ಯಕ್ಷ  ಶ್ರೀ. ನಾಯಕ್ ಮತ್ತು   ’ ಮೈಸೂರ್ ಸಂಗೀತ ವಿದ್ಯಾಲಯ ’ದ  ಸಹ-ಪ್ರಿನ್ಸಿಪಾಲ್,   ಶ್ರೀ. ನಾಗಭೂಷಣ್,  ಮೂರ್ತಿಯವರನ್ನು ಅಭಿನಂದಿಸಿದ ತರುವಾಯ ಸಭೆಗೆ ವಾಪಸ್ ಬರುತ್ತಿರುವ ದೃಷ್ಯ.... ಮೈಸೂರ್ ಅಸೋಸಿಯೇಷನ್ ಮತ್ತು ಮತ್ತಿತರ ಸಂಘ ಸಂಸ್ಥೆಗಳು  ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಶ್ರೀ ನಾಗಭೂಷಣ ದಂಪತಿಗಳು ಪಾಲ್ಗೊಂಡು, ಅವರಿಗೆ ಶಾಲನ್ನು ಹೊದೆಸಿ ಫಲತಾಂಬೂಲಗಳನ್ನು ಸಮರ್ಪಿಸಿ  ಅಭಿನಂದಿಸಿದರು. ಹಾಗೆಯೇ ಮುಂಬೈನ ಹಲವಾರು ಕನ್ನಡ ಸಂಸ್ಥೆಗಳು ಈ ಸಮಾರಂಭದಲ್ಲಿ ಹಾಜರಿದ್ದು ತಮ್ಮ ಗೌರವ,  ಸಂತೋಷಗಳನ್ನು ಮೂರ್ತಿಯವರ ಜೊತೆಗೆ ಹಂಚಿಕೊಂಡರು. ಫಿಲ್ಮ್ ಫ್ರಟರ್ನಿಟಿಯ ಶ್ರೀ ಗೋವಿಂದ್ ನಿಹಲಾನಿಯವರು,  ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು. ಸಮಾರಂಭದ ಪ್ರಮುಖ ಅತಿಥಿಯಾಗಿ ಹಿಂದೀ ಸಿನಿಮಾರಂಗದಲ್ಲಿ ಹೆಸರಾಂತ ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಶ್ರೀ. ಶ್ಯಾಮ್ ಬೆನೆಗಲ್ ಉಪಸ್ತಿತ...

ಪ್ರತಿಶ್ಠಿತ," ರಾಗ ಸುಧಾಲಯ ಪ್ರಶಸ್ತಿ," ವಿದುಷಿ, ಉಮಾನಾಗಭೂಷಣ್ ರವರಿಗೆ !

Image
ಮುಂಬೈನ ಉಪನಗರ, ಡೊಂಬಿವಲಿಯಲ್ಲಿರುವ ಪ್ರಸಿದ್ಧ ’ ಮೈಸೂರು ಸಂಗೀತ ವಿದ್ಯಾಲಯದ ಪ್ರಾಂಶುಪಾಲೆ, ವಿದುಷಿ, ಪ್ರಣವಶ್ರೀ ಉಮಾನಾಗಭೂಷಣರಿಗೆ ಬೆಂಗಳೂರಿನ ’ರಾಗಸುಧಾಲಯ ಚ್ಯಾರಿಟಿಬಲ್ ಟ್ರಸ್ಟ್, ’೨೦೦೯ ರ, ರಾಗಸುಧಾಲಯ ಪುರಸ್ಕಾರ ' ವನ್ನು ನೀಡಿ ಗೌರವಿಸಿದೆ. ಹೊರನಾಡುಪ್ರದೇಶದಲ್ಲಿ ಕನ್ನಡ ನಾಡಿನ ನಾಡು, ನುಡಿ, ಸಂಸ್ಕೃತಿಗಳನ್ನು ಉಳಿಸಿ ಬೆಳಸುವಲ್ಲಿ ಕಾಳಜಿವಹಿಸುತ್ತಿರುವ ನಾಗಭೂಷಣ್ ದಂಪತಿಗಳು, ನಿಜಕ್ಕೂ ಅಭಿನಂದನಾರ್ಹರು .... ಬೆಂಗಳೂರಿನ ಮಲ್ಲೇಶ್ವರದಲ್ಲಿರುವ, ಎಮ್. ಇ. ಎಸ್. ಕಾಲೇಜ್ ನ ಸಂಸ್ಕೃತ ಪ್ರಾಧ್ಯಾಪಕ, ಪ್ರೊ. ಎಮ್. ಎನ್. ಚಂದ್ರಶೇಖರ್ ರವರ, ಹಸ್ತದಿಂದ, ಕಾರ್ತೀಕಮಾಸ, ಶುಕ್ಲಪಕ್ಷ, ಶಷ್ಠಿ, ೦೮-೧೧-೨೦೦೯ ರ ರವಿವಾರ ಪುರಸ್ಕಾರ ಪ್ರದಾನಮಾಡಲಾಯಿತು.... ಕಲ್ಯಾದ್ರಿ, ೫೧೧೦, ಶಾಲಿವಾಹನ ಶಕೆ, ೧೯೩೧ ಶ್ರೀ ವಿರೋಧಿನಾಮ ಸಂವತ್ಸರದ ದಕ್ಶಿಣಾಯಣ, ಶರದ್ ಋತು, ಕಾರ್ತೀಕಮಾಸ, ಶುಕ್ಲಪಕ್ಷ, ಶಷ್ಠಿ, ೦೮-೧೧-೨೦೦೯ ರ ರವಿವಾರ, ದಂದು ಈ ಸಮಾರಂಭ ನೆರವೇರಿತು...

’ವರ್ಷದ ಕಲಾವಿದರು, ಪ್ರಶಸ್ತಿ’, ’ಬೆಂಗಳೂರು ಗಾಯನಸಮಾಜ” ದಿಂದ !

Image
ಪ್ರತಿಷ್ಟಿತ ಗಾಯನ ಸಮಾಜ, ಬೆಂಗಳೂರು, ಶ್ರೀಮತಿ. ಉಮಾ ನಾಗಭೂಷಣ್ ರಿಗೆ, ಹೊರನಾಡಿನಲ್ಲಿ ಅವರು ನಡೆಸುತ್ತಿರುವ ಸಂಗೀತ ಕೈಂಕರ್ಯವನ್ನು ಗುರುತಿಸಿ, ೧೧, ಅಕ್ಟೋಬರ್, ೨೦೦೯ ರಂದು, ಭಾನುವಾರ, ಬೆಳಿಗ್ಯೆ, ೧೦ ಗಂಟೆಗೆ ನಡೆದ, ೪೧ ನೆಯ ಸಂಗೀತ ಸಮ್ಮೇಳನದ ವಿದ್ವತ್ ಸಭೆ, " ಸದಸ್ " ನಲ್ಲಿ, " ವರ್ಷದ ಕಲಾವಿದರು " ಎಂದು ಗೌರವಿಸಲ್ಪಟ್ಟಿದ್ದಾರೆ. ಇದು ನಮ್ಮ ಮುಂಬೈ ಸಂಗೀತ ರಸಿಕರಿಗೆ, ಮತ್ತು ವಿದುಷಿ. ಉಮಾ ರವರ ನೂರಾರು ಸಂಗೀತದ ವಿದ್ಯಾರ್ಥಿಗಳಿಗೆ ಬಹು ಹೆಮ್ಮೆಯ ವಿಷಯವೆಂದು ತಿಳಿಸಲು ಹರ್ಷಿಸುತ್ತೇವೆ..... ಪರಮಾತ್ಮನು ವಿದುಷಿ. ಉಮಾನಾಗಭೂಷಣ್ ರವರಿಗೂ, ಹಾಗೂ ಅವರ ಪತಿ. ಶ್ರೀ. ನಾಗಭೂಷಣರಿಗೂ ಆಯುರಾರೋಗ್ಯ ಸಂಪತ್ತನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.

Ganapathy Pooja, at The Mysore Sangeetha vidyalaya, Dombivili !

Image
" ಶ್ರೀ ಮಹಾಗಣಪತಿ ವಾರ್ಷಿಕೋತ್ಸವ " ಪ್ರತಿಷ್ಠಾಪನೆ, ಪೂಜೆ, ಮತ್ತು ಆರತಿ. ಪ್ರಾಂಶುಪಾಲೆ, ವಿದುಷಿ, ಉಮಾನಾಗಭೂಷನ್ ಮತ್ತು ಶ್ರೀ. ನಾಗಭೂಷಣ್ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರು.... Lord Ganapathy Pooja, was conducted at The Mysore Sangeetha Vidyalaya, Dombivli. On Sunday, 23rd, August, 2009, * " Ganapathy Vigraha Pratishatapana function," was there, followed by Pooja, and Arathi. * Music by : Junior and Senior and Proficiency Studens of the Vidyalaya. On, Monday, 24th, August, 2009, * Music by the Students, of Mysore Sangeetha Vidyalaya. Under the headline, " shree Ganapathy Sangeetha Bhavaikya Malika" , (An Integration Programme , rendering 'Kritis of Lord Ganapathi', in various Indian languages), " *Chief Guest : Shri. Vishnu bhat C.A;  (Office bearer of 'Divine Park Trust') * Mahamangalarathi, * Ganapathy Visarjana, * Mahaprasada Viniyoga, * Sevartha by : * Successful candidates of Mysore Sangeetha Vidy...

Dombivli's ' Mysore Sangith Vidyalay,' bags the Award !

Image
(26th National Kannada Conference held at New-Delhi, presented the Award to ' The Mysore Sangith Vidyalay,' Dombivli, Mumbai, Maharashtra), ,ಇತ್ತೀಚೆಗೆ ಹೊಸ- ದೆಹಲಿಯಲ್ಲಿ ' ದೆಹಲಿ ಕನ್ನಡಿಗ ಪತ್ರಿಕೆ,' ಏರ್ಪಡಿಸಿದ್ದ, ’’೨೬ ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನ,’ ನಡೆದಾಗ, ಮುಂಬೈ ನ " ಉಪನಗರಿಯಲ್ಲಿರುವ ಡೊಂಬವಲಿಯ ಮೈಸೂರು ಸಂಗೀತ ವಿದ್ಯಾಲಯ " ಕ್ಕೆ "ಅತ್ಯುತ್ತಮ ಸಂಗೀತ ಶಿಕ್ಷಣ ಸಂಸ್ಥೆ " ಯೆಂಬ ಪ್ರಶಸ್ತಿಯನ್ನು ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ, ಪ್ರದಾನ ಮಾಡಲಾಯಿತು ! ತುಮಕೂರು ವಿಶ್ವವಿದ್ಯಾಲಯದ ಮಾಜೀ ಕುಲಪತಿ, ಪ್ರೊ. ಓ.ಅನಂತರಾಮಯ್ಯನವರು, ಶ್ರೀ ನಾಗಭೂಷಣರವರಿಗೆ ಶಾಲುಹೊದಿಸಿ ಸನ್ಮಾನಿಸುತ್ತಿದ್ದಾರೆ. 'ಬೆಂಗಳೂರಿನ ಕನ್ನಡಸಾಹಿತ್ಯ ಪರಿಷತ್ ನ ಅಧ್ಯಕ್ಷ, ' ಡಾ. ನಲ್ಲೂರ್ ಪ್ರಸಾದ್ ರವರು, ಮುಂಬೈನ 'ಮೈಸೂರು ಸಂಗೀತ ವಿದ್ಯಾಲಯ ' ಕ್ಕೆ, " ಬೆಸ್ಟ್ ಸಂಗೀತ ವಿದ್ಯಾಲಯ " ಸನ್ಮಾನದಿಂದ ಗೌರವಿಸಿದರು. ಶ್ರೀ ನಾಗಭೂಷಣರವರು, "ಪ್ರಶಸ್ತಿಪತ್ರ " ವನ್ನು ಸ್ವೀಕರಿಸುತ್ತಿದ್ದಾರೆ. (26th National Kannada Conference at New Delhi, ) ೨೬ ನೆಯ ರಾಷ್ಟ್ರೀಯ ಕನ್ನಡ ಕಾನ್ಫರೆನ್ಸ್ ಹೊಸ ದೆಹಲಿ ಯಲ್ಲಿ ಶ್ರೀ ನಾಗಭೂಷಣರು, ಸಿಂಪೋಸಿಯಮ್ ಒಂದರಲ್ಲಿ ಭಾಗವಹಿಸಿದಾಗ ತೆಗೆದ ಚಿ...

'ಮೈಸೂರು ಸಂಗೀತ ವಿದ್ಯಾಲಯ, ದೊಂಬಿವಲಿ', ಆಯೋಜಿಸಿದ್ದ, " ಶಂಕರ ವಿಜಯ," 'ಕಾವ್ಯವಾಚನ ಕಾರ್ಯಕ್ರಮ' ಯಶಸ್ವಿಯಾಗಿ ನೆರೆವೇರಿತು

ಮೈಸೂರು ಸಂಗೀತ ವಿದ್ಯಾಲಯ, ಡೊಂಬವಲಿಯವರು, ಕರ್ನಾಟಕ ಶಂಕರ ವಿಜಯ ಗಮಕವಾಚನವನ್ನು ಹೋದವಾರ, ಆಯೋಜಿಸಿದ್ದರು. ನವನವ ಕಾಳಿದಾಸ, ಕುಮಾರ ಸಂಭವ ಪೌರಾಣಿಕ ಶಿರೋಮಣಿ ಬಿರುದಾಂಕಿತ, ಆಸ್ಥಾನವಿದ್ವಾನ್ ಸಾಲಿಗ್ರಾಮ ಶ್ರೀಕಂಠಶಾಸ್ತ್ರಿ , ಗಳ ವಿರಚಿತ, ' ಕರ್ನಾಟಕ ಶಂಕರ ವಿಜಯ' ದ ಭಾಮಿನೀಷಟ್ಪದಿಯ ಗಮಕವಾಚನವನ್ನು ಗಮಕ ವಿದ್ವಾನ್. ಎಮ್. ಎ, ಜಯರಾಮರಾವ್ ರವರು ತಮ್ಮ ಮಧುರಕಂಠ, ವಿವಿಧ ರಾಗಗಳ ಸಂಯೋಜನೆ, ಸ್ಪುಟವಾದ ಸಾಹಿತ್ಯ ಉಚ್ಚಾರಣೆಗಳಿಂದ ಶ್ರೀ. ಶ್ರೀ. ಶಂಕರಾಚಾರ್ಯರ ಮತ್ತು ಶ್ರೀ. ಶ್ರೀ. ಮಂಡನಮಿಶ್ರರ ವಾಗ್ವಾದ ಭಾಗವನ್ನು ಪಾಂಡಿತ್ಯಪೂರ್ಣವಾಗಿ, ಎಲ್ಲಾ ವರ್ಗದ ಶ್ರೋತೃಗಳಿಗೂ ರುಚಿಸುವಂತೆ ವ್ಯಾಖ್ಯಾನಮಾಡಿದರು. ಕೇವಲ ಗಮಕ ವಾಚನವಲ್ಲದೆ ಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಸುಂದರ ವ್ಯಾಖ್ಯಾನ ಕಲೆಯಲ್ಲಿ ನಿಷ್ಣಾತರಾದ ರಾಯರ ಪ್ರತಿಭೆಗೆ, ಎಲ್ಲರೂ ಮನಸೋತರು. ಡೊಂಬಿವಲಿಯ, 'ಜಗದ್ಗುರು ಶ್ರೀ ಆದ್ಯ ಶಂಕರಾಚಾರ್ಯ ಸಮಿತಿ' ಯ ಅಧ್ಯಕ್ಷರಾದ ಎ. ಕೆ. ದೇಶಪಾಂಡೆ, ಉಪಾಧ್ಯಕ್ಷ ಎಚ್. ಎ. ಕುಲಕರ್ಣಿ, ಹಾಗೂ ಸಮಿತಿಯ ಸದಸ್ಯರು ಈ ಸಮಯದಲ್ಲಿ ಉಪಸ್ಥಿತರಿದ್ದರು. ಗಮಕ ವಿದ್ವಾನ್ ಜೈರಾಮ್ ರಾಯರಿಗೆ ಶಾಲುಹೊದಿಸಿ ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ, ’ಮೈಸೂರು ಸಂಗೀತ ವಿದ್ಯಾಲ” ದ ಪ್ರಾಂಶುಪಾಲರಾದ ಉಮಾನಾಗಭೂಷಣ ಹಾಗೂ ನಾಗಭೂಷಣ ದಂಪತಿಗಳಿಗೆ, ಶಾಲು ಹೊದಿಸಿ, ಫಲ-ಪುಷ್ಪಗಳನ್ನು ಸಮರ್ಪಿಸಿ ಸನ್ಮಾನಿಸಲಾಯಿತು.