ಪ್ರತಿಶ್ಠಿತ," ರಾಗ ಸುಧಾಲಯ ಪ್ರಶಸ್ತಿ," ವಿದುಷಿ, ಉಮಾನಾಗಭೂಷಣ್ ರವರಿಗೆ !
ಮುಂಬೈನ ಉಪನಗರ, ಡೊಂಬಿವಲಿಯಲ್ಲಿರುವ ಪ್ರಸಿದ್ಧ ’ ಮೈಸೂರು ಸಂಗೀತ ವಿದ್ಯಾಲಯದ ಪ್ರಾಂಶುಪಾಲೆ, ವಿದುಷಿ, ಪ್ರಣವಶ್ರೀ ಉಮಾನಾಗಭೂಷಣರಿಗೆ ಬೆಂಗಳೂರಿನ ’ರಾಗಸುಧಾಲಯ ಚ್ಯಾರಿಟಿಬಲ್ ಟ್ರಸ್ಟ್, ’೨೦೦೯ ರ, ರಾಗಸುಧಾಲಯ ಪುರಸ್ಕಾರ ' ವನ್ನು ನೀಡಿ ಗೌರವಿಸಿದೆ. ಹೊರನಾಡುಪ್ರದೇಶದಲ್ಲಿ ಕನ್ನಡ ನಾಡಿನ ನಾಡು, ನುಡಿ, ಸಂಸ್ಕೃತಿಗಳನ್ನು ಉಳಿಸಿ ಬೆಳಸುವಲ್ಲಿ ಕಾಳಜಿವಹಿಸುತ್ತಿರುವ ನಾಗಭೂಷಣ್ ದಂಪತಿಗಳು, ನಿಜಕ್ಕೂ ಅಭಿನಂದನಾರ್ಹರು ....
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ, ಎಮ್. ಇ. ಎಸ್. ಕಾಲೇಜ್ ನ ಸಂಸ್ಕೃತ ಪ್ರಾಧ್ಯಾಪಕ, ಪ್ರೊ. ಎಮ್. ಎನ್. ಚಂದ್ರಶೇಖರ್ ರವರ, ಹಸ್ತದಿಂದ, ಕಾರ್ತೀಕಮಾಸ, ಶುಕ್ಲಪಕ್ಷ, ಶಷ್ಠಿ, ೦೮-೧೧-೨೦೦೯ ರ ರವಿವಾರ ಪುರಸ್ಕಾರ ಪ್ರದಾನಮಾಡಲಾಯಿತು....
ಕಲ್ಯಾದ್ರಿ, ೫೧೧೦, ಶಾಲಿವಾಹನ ಶಕೆ, ೧೯೩೧ ಶ್ರೀ ವಿರೋಧಿನಾಮ ಸಂವತ್ಸರದ ದಕ್ಶಿಣಾಯಣ, ಶರದ್ ಋತು, ಕಾರ್ತೀಕಮಾಸ, ಶುಕ್ಲಪಕ್ಷ, ಶಷ್ಠಿ, ೦೮-೧೧-೨೦೦೯ ರ ರವಿವಾರ, ದಂದು ಈ ಸಮಾರಂಭ ನೆರವೇರಿತು...
Comments