ಸನ್. ೨೦೧೨ ರ ಸಾಲಿನ, 'ಶ್ರೀ. ಪುರುಂದರದಾಸರ ಮತ್ತು ಶ್ರೀ. ತ್ಯಾಗರಾಜರ ಆರಾಧನಾ ಮಹೋತ್ಸವ', 'ಡೊಂಬಿವಲಿಯ, ಮೈಸೂರ್ ಸಂಗೀತ ವಿದ್ಯಾಲಯ' ದಲ್ಲಿ ! !
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಲಿಯ ಮೈಸೂರು ಸಂಗೀತ ವಿದ್ಯಾಲಯ(ರಿ) ಆಯೋಜಿಸಿದ, ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ, ಡೊಂಬಿವಲಿ ಪೂರ್ವದಲ್ಲಿರುವ ಗಾಂಧಿನಗರದ 'ಧರ್ಮವೀರ ಆನಂದ ದಿಘೆ ಸಭಾಗೃಹ’ ದಲ್ಲಿ, ೨೦೧೨ ರ ಫೆಬ್ರವರಿ, ೫ ನೆಯ ತಾರೀಖು, ಭಾನುವಾರ ಮುಂಜಾನೆ ೯-೩೦ ಗಂಟೆಗೆ ಆರಂಭಗೊಂಡು ಸಾಯಂಕಾಲ ೬-೪೫ ಕ್ಕೆ ಕೊನೆಗೊಂಡಿತು.
ಆಗಮಿಸಿದ ಮುಖ್ಯ ಅತಿಥಿಗಳು :
ಶ್ರೀ. ಎಚ್.ಬಿ.ಎಲ್.ರಾವ್,(ಮಹಾರಾಷ್ಟ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, (ಕೆಲಸದ ಒತ್ತಡದಿಂದ ಅವರಿಗೆ ಬರಲಾಗಲಿಲ್ಲ)
ಗೌರವಾನ್ವಿತ ಅತಿಥಿ ಶ್ರೀ ಸತೀಶ್ ಎನ್. ನಾಯಕ್,
(Chief/Gen Manager, Head, Finance & Banking Onida Group of Companies)
ಕಾರ್ಯಕ್ರಮದ ಮೊದಲಿಗೆ, ವಿದ್ಯಾಲಯದ ಕಿರಿಯ, ಹಿರಿಯ ಹಾಗೂ ಪ್ರೌಢ ವಿದ್ಯಾರ್ಥಿಗಳು ಶ್ರೀ. ಪುರುಂದರದಾಸರ ಹಾಗೂ ಶ್ರೀ. ತ್ಯಾಗರಾಜರ ಕೃತಿಗಳನ್ನೂ ಸುಶ್ರಾವ್ಯವಾಗಿ ಸಭೆಯ ಮುಂದೆ ಪ್ರಸ್ತುತಪಡಿಸಿದರು.
* ಮೈ.ಸಂ.ವಿ. ದಲ್ಲಿ ಸಂಗೀತ ಶಾಸ್ತ್ರವನ್ನು ಅಭ್ಯಾಸ ಮಾಡುತ್ತಿರುವ ಮಕ್ಕಳು ಪ್ರಸ್ತುತಪಡಿಸಿದ ಕಾರ್ಯಕ್ರಮಗಳು :
-ತವದಾಸೋಹಂ ದಾಶರಥೆ
-ಪನ್ನಗಾಧಿಪತಿ ಶ್ರೀಪತಿ
-ಎರಡನೆಯ ಬ್ಯಾಚ್ :
-ಸುಜನ ಜೀವನ ರಾಮ ಸುಗುಣ ಭೂಷಣ
-ನಾರಸಿಂಹನೆಂಬ ದೇವನು
-ಜೂನಿಯರ್ ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗಲಿರುವವರು :
-ರಾಮ ನಾಮ ಭಜರೇ ಮಾನಸ
-ಆಡಿದನೇ ಹರಿ ಆಡಿದನೇ
-ಸೀನಿಯರ್ ವಿದ್ಯಾರ್ಥಿಗಳಿಂದ :
-ಶೋವಿಲ್ಲು ಸಪ್ತಸ್ವರ
-ಬಾಲವಲ್ಲಭ ನೀನಾರೈ ಕೃಷ್ಣ
-ಇಲ್ಲಿಗೆ ಪ್ರಥಮ ಸಭೆ ಮುಗಿಯಿತು.
ವಿದ್ವಾನ್ ಆರ್.ಕೆ.ಪಿ.ಯವರು ವಾದಿರಾಜರ ಕೃತಿಯಿಂದ ಆರಂಭಿಸಿ, ಶ್ರೀ. ಪುರುಂದರದಾಸರ ಹಾಗೂ ಶ್ರೀ. ತ್ಯಾಗರಾಜರ ಕೃತಿಗಳನ್ನೂ ಜೊತೆಗೆ ತಮ್ಮ ಕೃತಿಗಳನ್ನೂ ಸುಂದರವಾಗಿ ಪ್ರಸ್ತುತಪಡಿಸಿ ಸಭಿಕರ ಕರತಾಡನಕ್ಕೆ ಪಾತ್ರರಾದರು.
ವಿದ್ವಾನ್, ಆರ್.ಕೆ.ಪಿ.ಯವರು ಹಾಡಿದ ಕೃತಿಗಳು :
-ಬಂದನೇನೆ ರಂಗ ಬಂದನೇನೆ- ಪುರಂದರ ದಾಸರ ಕೃತಿ.
-ಎಂತ ವೇಡುಕೊಂದು ಓ ರಾಘವಾ-ತ್ಯಾಗರಾಜರ ಕೃತಿ.
-ಅರುಣೋದಯದಲ್ಲಿ ಎದ್ದು ನದಿಯ ಸ್ನಾನಂಗಳಮಾಡಿ-ಪುರಂದರ ದಾಸರ ಕೃತಿ
-ಏನುಮಾಡಿದರೇನು ಭವ ಹಿಂಗದೋ-ಪುರಂದರ ದಾಸರ ಕೃತಿ
-ಮರುಗೇಲರಾ ಓ ರಾಘವ-ತ್ಯಾಗರಾಜರ ಕೃತಿ.
-ರಾಗ ತಾನ ಪಲ್ಲವಿಗಳಲ್ಲಿ ಪ್ರಮುಖ ರಾಗಗಳನ್ನು ಆಲಾಪನೆಮಾಡಿ ವಿವಿಧ ಪ್ರಕಾರದ ತಾನ ಕ್ರಮಗಳಾದ ಕುಕ್ಕುಟ ತಾನ , ಮರ್ಕಟ ತಾನ , ಮಯೂರ ತಾನ ಮುಂತಾದವುಗಳನ್ನು ವಿವರಗಳೊಂದಿಗೆ ಹಾಡಿ ತೋರಿಸಿದಾಗ ಮಕ್ಕಳಾದಿಯಾಗಿ ಸಂಗೀತ ಪ್ರಯರಿಗೆಲ್ಲ ಅದು ಮುದಕೊಟ್ಟಿತು.
-ಓಉಮ ನಾಗಭೂಷಣ ನಿಮಗೆ ನಮನ-ಪದ್ಮನಾಭ ದಾಸರ ಕೃತಿ.
-ವಿಶ್ವವೆ ವೀಣೆ, ನಾದವೆ ವಾಣಿ ನಾದ ತರಂಗಗಳೆ ವಾಣಿಯ ವೇಣಿ-ಪದ್ಮನಾಭ ದಾಸರ ಕೃತಿ.
-ಪಾರ್ವತಿ ಭಗವತಿ ಪಾಲಿಸಮ್ಮ-ಪದ್ಮನಾಭ ದಾಸರ ಕೃತಿ.
ಕಾರ್ಯಕ್ರಮದ ವಿವರಗಳು ಹೀಗಿದ್ದವು :
* ಪೂಜೆ, ಅಭಿಷೇಕ, ಅಷ್ಟೋತ್ತರ, ಆರತಿ
ವಿದ್ಯಾರ್ಥಿನಿಯರಿಂದ ಕಾರ್ಯಕ್ರಮ.
ವಿದ್ಯಾರ್ಥಿಗಳಿಂದ ಕಾರ್ಯಕ್ರಮ.
ಆರ್. ಕೆ. ಪಿ. ಮತ್ತು ಗಣ್ಯರು ಕಾರ್ಯಕ್ರಮವನ್ನೂ ವಿಕ್ಷಿಸುತ್ತಿದ್ದಾರೆ.
ಬೆಂಗಳೂರಿನ, ಗಾನಕಲಾಭೂಷಣ ಆರ್. ಕೆ. ಪದ್ಮನಾಭ ರವರಿಂದ ಗಾಯನ,
ಮುಂಬೈನ ವಿದ್ವಾನ್, ಎಸ್. ವಿ. ರಾಮಚಂದ್ರನ್ ಪಿಟೀಲು
ಬೆಂಗಳೂರಿನ, ವಿದ್ವಾನ್ ಸಿ.ಚೆಲುವರಾಜು ರವರಿಂದ ಮೃದಂಗ,
ನಂತರ ವಿದ್ಯಾಲಯದ ಉಪಾಧ್ಯಕ್ಷ ರಾಮು ಶೇಟ್ ಹೆಬ್ಬಳ್ಳಿಯವರು ಎಲ್ಲರನ್ನು ಸ್ವಾಗತಿಸಿದರು. ಆನಂದ ಲಕ್ಷಿಯವರು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾಲಯದ ವಾರ್ಷಿಕ ವರದಿಯನ್ನೂ ಮೀರಾರವರು ಓದಿದರು. ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ವೇತನಗಳನ್ನು ವಿತರಿಸಲಾಯಿತು. ನಾಗಭೂಷಣ್ ವಂದನೆ ಸಲ್ಲಿಸಿದರು.
ಉಪಾಧ್ಯಕ್ಷರುಗಳಾದ ಆರ್. ಬಿ. ಹೆಬ್ಬಳ್ಳಿ ಮತ್ತು ಭವಾನಿ ಶಂಕರ್ ವಿದ್ಯಾಲಯದ ಪರವಾಗಿ ಆರ್ ಕೆ.ಪಿ.ಯವರಿಗೆ ಶಾಲು ಹೊದಿಸಿ ಪುಷ್ಪ ಗುಚ್ಛ, ಸ್ಮರಣಿಕೆಗಳನ್ನಿತ್ತು ಗೌರವಿಸುತ್ತಿರುವುದು.
ವಿದ್ವಾನ್ ರಾಮಚಂದ್ರನ್ ರವರಿಗೆ ಪುಷ್ಪ ಗುಚ್ಚವನ್ನಿತ್ತು ಗೌರವಿಸುತ್ತಿರುವುದು.
ಚೆಲುವರಾಜು ರವರಿಗೆ ಗೌರವ ಸಮರ್ಪಣೆ
ವಿದ್ವಾನ್ ಚೆಲುವರಾಜುರವರಿಗೆ ಪುಷ್ಪ ಗುಚ್ಛ ಸಮರ್ಪಣೆ.
ವೇದಿಕೆಯ ಮೇಲೆ, ಆರ್.ಬಿ.ಹೆಬ್ಬಳ್ಳಿ, ಆರ್.ಕೆ.ಪಿ. ಮತ್ತು ಶ್ರೀ. ನಾಯಕ್, ಮತ್ತು ವಿದುಷಿ ಉಮಾ ನಾಗಭೂಷಣ್
ಡಾ.ರಘುನಾಥ್, ವಿದ್ವಾನ್ ಆರ್.ಕೆ.ಪಿ.ಯವರಿಗೆ, ಪುಷ್ಪಗುಚ್ಛ ಸಮರ್ಪಣೆ ಮಾಡುತ್ತಿರುವುದು.
ವೇದಿಕೆಯ ಮೇಲೆ ಆರ್.ಕೆ.ಪಿ.ಯವರು ಗಣ್ಯರ ಜೊತೆಯಲ್ಲಿ.
ಮುಖ್ಯ ಅತಿಥಿಯವರನ್ನು ಆರ್.ಬಿ. ಹೆಬ್ಬಳ್ಳಿಯವರು ಗೌರವಿಸುತ್ತಿರುವುದು.
ಪ್ರಾಂಶುಪಾಲೆ ಉಮಾರವರು ಆರ್.ಕೆ.ಪಿ.ಯವರಿಗೆ ಫಲ-ತಾಂಬೂಲ ಸಮರ್ಪಿಸುತ್ತಿರುವುದು.ಆರ್.ಕೆ.ಪಿ. ಯವರು ಶ್ರೀ. ನಾಗಭೂಷಣ್ ರವರನ್ನು ಅಭಿನಂದಿಸುತ್ತಿರುವುದು.
ಅತಿಥಿಯವರ ಜೊತೆ, ಶ್ರೀ. ಗುರುರಾಜ ನಾಯಕ್, ವೆಂಕಟೇಶ್ ಮತ್ತು ಇತರರು.
ಬೆಂಗಳೂರಿನ ಅಂಬಿಕ ಪ್ರಸಾದ್ ಹಾಡುತ್ತಿರುವುದು.
ಮೀರಾರವರ ಕೊಳಲು ವಾದನ
ಪುಟ್ಟಮಕ್ಕಲಾದ ಧನಲಕ್ಷ್ಮಿ ಮತ್ತು ಸಿದ್ದೇಶ್ ವೈಲೆನ್ ಬಾರಿಸುತ್ತಿರುವುದು.
ನಾಗಭೂಷಣ್ ದಂಪತಿಗಳು ಕಾರ್ಯಕ್ರಮವನ್ನೂ ವೀಕ್ಷಿಸುತ್ತಿರುವುದು.
ವಿದ್ವಾನ್ ಶ್ರೀ. ಚೆಲುವರಾಜ್ ಮತ್ತು ವಿದ್ವಾನ್ ಶ್ರೀ. ಆರ್.ಕೆ.ಪದ್ಮನಾಭ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವುದು.
ಶ್ರೀ. ನಾಗಭೂಷಣ್, ಉಮಾ ನಾಗಭೂಷಣ್
ಅಭಿಜಿತ್ ವಯೋಲಿನ್ ಬಾರಿಸುತ್ತಿರುವುದು.
ಹೈದರಾಬಾದ್ ನಿಂದ ಬಂದ ನಾಗೇಶ್ ಹಾಡುತ್ತಿರುವುದು
ಬೇಬಿ ಶ್ರದ್ಧಾ ಗಿರೀಶ್ ನೃತ್ಯಾಭಿನಯ
ರವಿಕಿರಣ್ ರಾವ್ ಹಾಡುತ್ತಿರುವುದು.
ವಿದ್ವಾನ್. ಆರ್.ಕೆ.ಪಿ.ಯವರ ಪರಮಪ್ರಿಯರೊಬ್ಬರು.
ಸಂಗೀತ ಕಚೇರಿಯಲ್ಲಿ ಕೇಳಲು ಬಂದವರಲ್ಲಿ ಹೆಚ್ಚಿನವರು ಮಹಿಳೆಯರೇ
* ಅಂಬಿಕಾ ಪ್ರಸಾದ್,
* ರವಿ ಕಿರಣರಾವ್
* ಅನಿತಾ ಭಾಸ್ಕರ್
* ಅಭಿಜಿತ್
ಪಕ್ಕವಾದ್ಯದಲ್ಲಿ ಕೃಷ್ಣನ್ ಪಿಟೀಲು, ರಾಮಮೋಹನ್, ಮೃದಂಗ
ಸಂಗೀತ ಸೇವಾ ವಿದ್ಯಾಲಯದ ದೇವರನಾಮ ವೃಂದದವರಿಂದ ; ಆನಂದ ಲಕ್ಷ್ಮಿ, ರೋಹಿಣಿ, ಮಲ್ಲಿಕ, ಪ್ರೇಮ ಮತ್ತು ಸವಿತಾ, 'ಹರಿ ಕೀರ್ತನ ತರಂಗಿಣಿ' ಯಿಂದ ಹರಿದಾಸರ ವಿವಿಧ ಕೃತಿಗಳನ್ನು ಸಭಿಕರ ಮುಂದೆ ತಂದರು.
ಪದಾಧಿಕಾರಿಗಳು :
ಚೇರ್ಮನ್ : ಡಾ. ವಿಜಯ್ ನೆಗಲೂರ್,
ಉಪ-ಚೇರ್ಮನ್, ಆರ್. ಬಿ. ಹೆಬ್ಬಳ್ಳಿ
ಪ್ರಾಂಶುಪಾಲರು : ವಿದುಷಿ, ಉಮಾ ನಾಗಭೂಷಣ
Comments
ಬಹುಶಃ ಬಾಲಮುರುಳಿಕೃಷ್ಣರ ನಂತರ ಆರ್.ಕೆ.ಪಿ.ಯವರು ಆ ಅದ್ಭುತ ಸ್ಥಾನಕ್ಕೆ ಅರ್ಹರು ಎನ್ನುವುದು ನನ್ನ(ಸಂಗೀತ ತಿಳಿಯದ ಕೇವಲ ಕೆಳುಗನಷ್ಟೆ) ಅಭಿಮತ !
ಬಹುಶಃ ಬಾಲಮುರುಳಿಕೃಷ್ಣರ ನಂತರ ಆರ್.ಕೆ.ಪಿ.ಯವರು ಆ ಅದ್ಭುತ ಸ್ಥಾನಕ್ಕೆ ಅರ್ಹರು ಎನ್ನುವುದು ನನ್ನ(ಸಂಗೀತ ತಿಳಿಯದ ಕೇವಲ ಕೆಳುಗನಷ್ಟೆ) ಅಭಿಮತ !