೨೦೦೨ ರಲ್ಲಿ ೨೦ ನೆಯ ವರ್ಷದ ಸಮಾರಂಭದ ನೆನಪಿನಲ್ಲಿ....
* ಡಾ. ವೆಂಕಟ ಗಡ್ವಾಲ್ ಸ್ಮೃತಿಗ್ರಂಥವನ್ನು ಬಿಡುಗಡೆಮಾಡಿದರು....
* ಬೆಂಗಳೂರಿನಲ್ಲಿ ’ಮೈಸೂರು ಸಂಗೀತ ವಿದ್ಯಾಲಯಕ್ಕೆ ಗೌರವ ” ಸಲ್ಲಿಸಲಾಯಿತು.
" ಕರ್ನಾಟಕ ಸಂಗೀತ ಗಾಯನವು ಕೇವಲ ಮನರಂಜನೆಯಲ್ಲಿ ಮಾತ್ರವಲ್ಲದೆ, ಅಧ್ಯಾತ್ಮವೂ ಅದರಲ್ಲಡಗಿರುವುದನ್ನು ನಾವು ಗುರುತಿಸಬೇಕು. ಲೌಕಿಕ ಹಾಗೂ ಪಾರಮಾರ್ಥಿಗಳ ಸುಖಕ್ಕೆ ಲಭ್ಯವಾಗಿರುವ ಸಂಗೀತವೆಂದರೆ, ’ಕರ್ನಾಟಕ ಸಂಗೀತ ’ ! -ವಿದುಷಿ, ಶ್ರೀಮತಿ. ಉಮಾನಾಗಭೂಷಣ, ಪ್ರಾಂಶುಪಾಲರು, ಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ. ಮಹಾರಾಷ್ಟ್ರ ರಾಜ್ಯ. ದೂರಧ್ವನಿ ಕ್ರಮಾಂಕ : 09323986708/02513292174
Comments
’ಬಲು ಎತ್ತರವ ನೀವ್ ತಲುಪಿರಿ. ನಿಮ್ಮ ಸಾಧನೆಗಳ ಮೆಟ್ಟಿಲುಗಳ ಕೆಳಗೆ ನಿಂತು, ನಿಮ್ಮ ಸಾಧನೆ ಹಾಗೂ ಪರಿಶೋಧನೆಗಳ ನಿಮ್ಮ ಸಾಮರ್ಥ್ಯವನ್ನು ನಾ ಬಲ್ಲೆನು..
ಮನದ ದಡಕ್ಕೆ ಅಪ್ಪಳಿಸುವ ಸಂಗೀತದ ಅಲೆಗಳನ್ನು ನಾ ಕಂಡೆನು. ಅವುಗಳ ಭೋರ್ಗರೆವ ನಾದದಹಿಂದೆ, ಮನದಾಳದ ನೋವುಗಳನ್ನು ಅರಿಯಲಾಗದೆ, ಮೌನರಾಗದಂತೆ, ಮೂಕ ಪ್ರೇಕ್ಷಕಿಯಾದೆನು !
-ದಿವ್ಯಶ್ರೀ, ರುಕ್ಮಿಣೀ, ಮಂಜು, ಲಕ್ಷ್ಮೀ ಮತ್ತು ಜಾನ್ಹವಿ.