Posts

Showing posts from September, 2017

ಮುಂಬಯಿಯ ಮೈಸೂರ್ ಸಂಗೀತ ವಿದ್ಯಾಲಯ ದೊಂಬಿವಲಿಯ ಆಡಳಿತಾಧಿಕಾರಿ ಶ್ರೀ. ಬಿ. ನಾಗಭೂಷಣ್ ಇನ್ನಿಲ್ಲ !

Image
ಮುಂಬಯಿಯ ಮೈಸೂರ್ ಸಂಗೀತ ವಿದ್ಯಾಲಯ ದೊಂಬಿವಲಿಯ ಆಡಳಿತಾಧಿಕಾರಿ ಶ್ರೀ. ಬಿ. ನಾಗಭೂಷಣ್ ಇನ್ನಿಲ್ಲ ! ನನ್ನ ಆತ್ಮೀಯ ಗೆಳೆಯ, ಹಾಗೂ ಮುಂಬೈ ಕನ್ನಡಿಗರ ಪ್ರೀತಿಯ ನಾಗಭೂಷಣ್, 10 ಆಗಸ್ಟ್, ೨೦೧೭ ರಂದು ಬೆಂಗಳೂರಿನಲ್ಲಿ ನಿಧನರಾದರು. ಸದಾ ಹಸನ್ಮುಖಿ, ಹಾಗು ಒಳ್ಳೆಯ ಸಂಘಟಕ ಮತ್ತು ಸಹೃದಯಿ ! ಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ  : ೧೯೮೨ ರಲ್ಲಿ ಮುಂಬಯಿನ ಹೆಸರಾಂತ ವೀಣಾ ವೈಣಿಕ, ಶ್ರೀ. ಶಂಕರನಾರಾಯಣ ರಾಯರ ಆಶೀರ್ವಾದದಿಂದ ಕರ್ನಾಟಕ ಸಂಗೀತ  ವಿದುಷಿ. ಉಮಾ ನಾಗಭೂಷಣ್ ಹಾಗೂ ನಾಗಭೂಷಣ್ ದಂಪತಿಗಳು ಡೊಂಬಿವಲಿಯಲ್ಲಿ  ಮೈಸೂರು ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು.  ಇಲ್ಲಿ ಮಕ್ಕಳಿಗೆ, ಯುವಕರಿಗೆ, ಹಾಗು ಸಂಗೀತಾಭಿಲಾಷಿಗಳಿಗೆಲ್ಲಾ ಸಂಗೀತ ಕಲಿಸಲು ಆರಂಭಿಸಿದರು. ಬೆಂಗಳೂರಿನ ಸಂಗೀತ ಪರೀಕ್ಷಾ ಕೇಂದ್ರದಲ್ಲಿ  ಮುಂಬಯಿನ ಉಮನಾಗಭೂಷಣ್ ರವರ ವಿದ್ಯಾರ್ಥಿಗಳು ಭಾಗವಹಿಸಿ, ಪದವಿ ಪಡೆಯುತ್ತಿದ್ದರು.  ಈ ವಿದ್ಯಾರ್ಥಿಗಳಿಗೆ ಸಂಗೀತದ ಪ್ರಶಿಕ್ಷಣವನ್ನು ಉಮಾರವರು ಕೊಡುತ್ತಿದ್ದರು. ನಾಗಭೂಷರು, ಈ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಪರೀಕ್ಷೆ ಕೇಂದ್ರಕ್ಕೆಕರೆದುಕೊಂಡು ಹೋಗಿ, ಪರೀಕ್ಷೆ  ಮುಗಿದ ಬಳಿಕ ಅವರನ್ನು ಮುಂಬಯಿಗೆ ಕ್ಷೇಮವಾಗಿ ಕರೆದುಕೊಂಡು ಬರುವ ಗುರುತಗರ ಜವಾಬ್ದಾರಿಯನ್ನು ಹಲವು ದಶಕಗಳ ಕಾಲ ಅತ್ಯಂತ ಸಮರ್ಪಕವಾಗಿ ನಿಭಾಯಿಸಿದರು.  ಈಗ ಮುಂಬಯಿನಲ್ಲೇ ...