Posts

Showing posts from March, 2010

ಪ್ರತಿಶ್ಠಿತ ಫಾಲ್ಕೆ ಪ್ರಶಸ್ತಿ ವಿಜೇತ, ಶ್ರೀ ವಿ. ಕೆ. ಮೂರ್ತಿಯವರನ್ನು ಮುಂಬೈ ಜನತೆ ಗೌರವಿಸಿತು !

Image
ಡೊಂಬಿವಲಿಯಲ್ಲಿರುವ ಹಿರಿಯ ಸಂಗೀತ ಶಿಕ್ಷಣ ಸಂಸ್ಥೆ, ’ ಮೈಸೂರ್ ಸಂಗೀತ ವಿದ್ಯಾಲಯ ’ ದ ಪ್ರಾಂಶುಪಾಲೆ, ವಿದುಷಿ, ಶ್ರೀಮತಿ. ಉಮಾನಾಗಭೂಷಣ್,  ಮತ್ತು ಅವರ ಪತಿ,  ಸಹ-ಪ್ರಿನ್ಸಿಪಾಲ್, ಶ್ರೀ. ನಾಗಭೂಷಣ್ ರವರು ವಿ. ಕೆ. ಮೂರ್ತಿಯವರನ್ನು ಅಭಿನಂದಿಸಿ ಗೌರವಿಸಿದರು.... ಸುಂದರವಾಗಿ ಹೊರತಂದ,  ಆಹ್ವಾನ ಪತ್ರಿಕೆ, ಮುಂಬೈ ಕನ್ನಡ ಸಂಘದ ಅಧ್ಯಕ್ಷ  ಶ್ರೀ. ನಾಯಕ್ ಮತ್ತು   ’ ಮೈಸೂರ್ ಸಂಗೀತ ವಿದ್ಯಾಲಯ ’ದ  ಸಹ-ಪ್ರಿನ್ಸಿಪಾಲ್,   ಶ್ರೀ. ನಾಗಭೂಷಣ್,  ಮೂರ್ತಿಯವರನ್ನು ಅಭಿನಂದಿಸಿದ ತರುವಾಯ ಸಭೆಗೆ ವಾಪಸ್ ಬರುತ್ತಿರುವ ದೃಷ್ಯ.... ಮೈಸೂರ್ ಅಸೋಸಿಯೇಷನ್ ಮತ್ತು ಮತ್ತಿತರ ಸಂಘ ಸಂಸ್ಥೆಗಳು  ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಶ್ರೀ ನಾಗಭೂಷಣ ದಂಪತಿಗಳು ಪಾಲ್ಗೊಂಡು, ಅವರಿಗೆ ಶಾಲನ್ನು ಹೊದೆಸಿ ಫಲತಾಂಬೂಲಗಳನ್ನು ಸಮರ್ಪಿಸಿ  ಅಭಿನಂದಿಸಿದರು. ಹಾಗೆಯೇ ಮುಂಬೈನ ಹಲವಾರು ಕನ್ನಡ ಸಂಸ್ಥೆಗಳು ಈ ಸಮಾರಂಭದಲ್ಲಿ ಹಾಜರಿದ್ದು ತಮ್ಮ ಗೌರವ,  ಸಂತೋಷಗಳನ್ನು ಮೂರ್ತಿಯವರ ಜೊತೆಗೆ ಹಂಚಿಕೊಂಡರು. ಫಿಲ್ಮ್ ಫ್ರಟರ್ನಿಟಿಯ ಶ್ರೀ ಗೋವಿಂದ್ ನಿಹಲಾನಿಯವರು,  ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು. ಸಮಾರಂಭದ ಪ್ರಮುಖ ಅತಿಥಿಯಾಗಿ ಹಿಂದೀ ಸಿನಿಮಾರಂಗದಲ್ಲಿ ಹೆಸರಾಂತ ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಶ್ರೀ. ಶ್ಯಾಮ್ ಬೆನೆಗಲ್ ಉಪಸ್ತಿತ...