Posts

Showing posts from April, 2009

'ಮೈಸೂರು ಸಂಗೀತ ವಿದ್ಯಾಲಯ, ದೊಂಬಿವಲಿ', ಆಯೋಜಿಸಿದ್ದ, " ಶಂಕರ ವಿಜಯ," 'ಕಾವ್ಯವಾಚನ ಕಾರ್ಯಕ್ರಮ' ಯಶಸ್ವಿಯಾಗಿ ನೆರೆವೇರಿತು

ಮೈಸೂರು ಸಂಗೀತ ವಿದ್ಯಾಲಯ, ಡೊಂಬವಲಿಯವರು, ಕರ್ನಾಟಕ ಶಂಕರ ವಿಜಯ ಗಮಕವಾಚನವನ್ನು ಹೋದವಾರ, ಆಯೋಜಿಸಿದ್ದರು. ನವನವ ಕಾಳಿದಾಸ, ಕುಮಾರ ಸಂಭವ ಪೌರಾಣಿಕ ಶಿರೋಮಣಿ ಬಿರುದಾಂಕಿತ, ಆಸ್ಥಾನವಿದ್ವಾನ್ ಸಾಲಿಗ್ರಾಮ ಶ್ರೀಕಂಠಶಾಸ್ತ್ರಿ , ಗಳ ವಿರಚಿತ, ' ಕರ್ನಾಟಕ ಶಂಕರ ವಿಜಯ' ದ ಭಾಮಿನೀಷಟ್ಪದಿಯ ಗಮಕವಾಚನವನ್ನು ಗಮಕ ವಿದ್ವಾನ್. ಎಮ್. ಎ, ಜಯರಾಮರಾವ್ ರವರು ತಮ್ಮ ಮಧುರಕಂಠ, ವಿವಿಧ ರಾಗಗಳ ಸಂಯೋಜನೆ, ಸ್ಪುಟವಾದ ಸಾಹಿತ್ಯ ಉಚ್ಚಾರಣೆಗಳಿಂದ ಶ್ರೀ. ಶ್ರೀ. ಶಂಕರಾಚಾರ್ಯರ ಮತ್ತು ಶ್ರೀ. ಶ್ರೀ. ಮಂಡನಮಿಶ್ರರ ವಾಗ್ವಾದ ಭಾಗವನ್ನು ಪಾಂಡಿತ್ಯಪೂರ್ಣವಾಗಿ, ಎಲ್ಲಾ ವರ್ಗದ ಶ್ರೋತೃಗಳಿಗೂ ರುಚಿಸುವಂತೆ ವ್ಯಾಖ್ಯಾನಮಾಡಿದರು. ಕೇವಲ ಗಮಕ ವಾಚನವಲ್ಲದೆ ಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಸುಂದರ ವ್ಯಾಖ್ಯಾನ ಕಲೆಯಲ್ಲಿ ನಿಷ್ಣಾತರಾದ ರಾಯರ ಪ್ರತಿಭೆಗೆ, ಎಲ್ಲರೂ ಮನಸೋತರು. ಡೊಂಬಿವಲಿಯ, 'ಜಗದ್ಗುರು ಶ್ರೀ ಆದ್ಯ ಶಂಕರಾಚಾರ್ಯ ಸಮಿತಿ' ಯ ಅಧ್ಯಕ್ಷರಾದ ಎ. ಕೆ. ದೇಶಪಾಂಡೆ, ಉಪಾಧ್ಯಕ್ಷ ಎಚ್. ಎ. ಕುಲಕರ್ಣಿ, ಹಾಗೂ ಸಮಿತಿಯ ಸದಸ್ಯರು ಈ ಸಮಯದಲ್ಲಿ ಉಪಸ್ಥಿತರಿದ್ದರು. ಗಮಕ ವಿದ್ವಾನ್ ಜೈರಾಮ್ ರಾಯರಿಗೆ ಶಾಲುಹೊದಿಸಿ ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ, ’ಮೈಸೂರು ಸಂಗೀತ ವಿದ್ಯಾಲ” ದ ಪ್ರಾಂಶುಪಾಲರಾದ ಉಮಾನಾಗಭೂಷಣ ಹಾಗೂ ನಾಗಭೂಷಣ ದಂಪತಿಗಳಿಗೆ, ಶಾಲು ಹೊದಿಸಿ, ಫಲ-ಪುಷ್ಪಗಳನ್ನು ಸಮರ್ಪಿಸಿ ಸನ್ಮಾನಿಸಲಾಯಿತು.